ಗಜಲ್
******
ಕೃಷ್ಣನೆಂದರೆ ತಾನೇ ಎನ್ನುವಷ್ಟು
ತನ್ಮಯಳಾದಳು ರಾಧೆ
ಅರ್ಪಣೆ ಅಂದರೆ ನಂದಕಿಶೋರನ ಧ್ವನಿಗೆ ಕೊಳಲಾದಳು ರಾಧೆ
ಕೃಷ್ಣನ ಶರಧಿಗೆ ದಡವಾಗಿ ಪ್ರೀತಿಯಲಿ
ಕಡಲಾಗಿದ್ದು ದಿಟವಲ್ಲವೇ?
ಸೇರದೆಯೂ ಬೆರೆತು ಅವನಾತ್ಮವಾದಳು ರಾಧೆ
ಮೋಹನನ ಮೋಹಕೆ ಸಿಲುಕದೆ ಅವಳೇ ಪ್ರೇಮವಾದದ್ದು ಸುಳ್ಳಲ್ಲ
ಮಾಧವ ನಾಮದಿಂದಲೇ
ಜೀವ ಪಡೆದಳು ರಾಧೆ
ಅಂಗಸಂಗ ಭೋಗಗಳ ಮೀರಿ ಹರಿಗೆ ಒಲವ ಸರೋವರವಾದಳು ಅಲ್ಲವೇ?
ಲೋಕದ ಹಂಗ್ ತೊರೆದು
ಗೋಪಾಲಗೆ ಲೋಕವಾದಳು ರಾಧೆ
ದೇವನೂರಿಗೆ ರಹ ದಾರಿ ತೋರಿದವಳು ಅನುಕ್ಷಣ ಭಜಿಸಿ ಗೋಪಿಯ
ನಿತ್ಯ ಒಪ್ಪಿಸಿ ತನ್ನೆ ನೀಲ ಶ್ಯಾಮನ
ಧ್ಯಾನವಾದಳು ರಾಧೆ
ಚಂದನ ವದನದಿ ಅವನನ್ನೇ ನಗುವಲ್ಲಿ ತುಂಬಿ ಚೆಲುವಾದವಳಲ್ಲವೇ?
ಹೃದಯ ಕಮಲದಿ ನೆಲೆಸಿ ನಿರ್ಮಲ ಪ್ರೀತಿಗೆ ದ್ಯೋತಕವಾದಳು ರಾಧೆ
ದೇವರ ದೇವನಿಗೂ ಮುನ್ನ ನಾಮದಲಿ ಸೇರಿ ರಾಧಾ ಮಾಧವ ಎನಿಸಿಕೊಂಡಳಲ್ಲವೇ?
ಪ್ರೇಮವೆಂದರೆ ಬರೀ ಅರ್ಪಣೆ ಎನ್ನದೆ
ಕೃಷ್ಣನೇ ತಾನಾದಳು ರಾಧೆ
-ದೇವರಾಜ್ ಹುಣಿಸಿಕಟ್ಟಿ.
ಶಿಕ್ಷಕರು,ಕವಿಗಳು,ರಾಣೇಬೆನ್ನೂರ್.
*****
ಸೂಪರ್ ಸರ್…… ರಾಧೆ ಕೃಷ್ಣ ರ ಪ್ರೀತಿಯ ಅಮರ ಮಧುರ ಎನ್ನುವ ಕವನ….. ಸುಂದರವಾಗಿದೆ…….
ಸುಂದರವಾದ ಗಜಲ್….
ಮಾಧವ ನಾಮದಿಂದಲೇ
ಜೀವ ಪಡೆದಿಹಳು ರಾಧೆ…..
ಸೂಪರ್ ಸರ್ …n2n2