ಕರ್ನಾಟಕ ಕಹಳೆ ಡಾಟ್ ಕಾಮ್’ ನ ಜನಪ್ರಿಯ ‘ಅನುದಿನ ಕವನ’ ವಿಶೇಷ ಕಾಲಂ ಆರಂಭವಾಗಿ ಇಂದಿಗೆ 125 ದಿನಗಳಾದವು ಎಂದು ತಿಳಿಸಲು ಹರ್ಷಿಸುವೆ.
ಈ ನೂರಾ ಇಪ್ಪತ್ತೈದು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು ನಿರಂತರವಾಗಿ ಪ್ರಕಟಿಸಿದ ಖುಷಿ ನಮ್ಮದು.
ಇಂದಿನ 125ನೇ “ಅನುದಿನ ಕವನ”ದ ಗೌರವಕ್ಕೆ ಪ್ರೇಮಕವಿ ಎಂದು ತಮ್ಮ ಪ್ರೀತಿ ಪಾತ್ರರಿಂದ ಕರೆಸಿಕೊಳ್ಳುವ ನಾಡಿನ ಹಿರಿಯ ಪೊಲೀಸ್ ಅಧಿಕಾರಿ, ಮನಂ ಕಾವ್ಯನಾಮದಲ್ಲಿ ಕವನಗಳನ್ನು ರಚಿಸುತ್ತಿರುವ ಶ್ರೀ ಎಂ.ನಂಜುಂಡಸ್ವಾಮಿ (ಮನಂ) ಅವರ ಮಳವಳ್ಳಿ(ಮಾಳವ) ಭಾಷೆಯಲ್ಲಿರುವ ‘ನಾಮ್ಯಾರೋ
ನೀಮ್ಯಾರೋ’ ಕವಿತೆ ಪಾತ್ರವಾಗಿದೆ.👇
(ಸಂಪಾದಕರು)
ನಾಮ್ಯಾರೋ ನೀಮ್ಯಾರೋ
ಜೋ ನಿನ್ನತಾಮು
ನಿಮ್ಮವ್ವಿದ್ರೆ
ನಮ್ಮವ್ವನ್ನ
ಸರ್ಯಾಗಿ
ಕಾಣ್ತಿಯೆ
ಜೋ ನಿನ್ನತಾಮು
ನಿಮ್ಮೈಕ್ಳಿದ್ದ್ರೆ
ನಮ್ಮೈಕ್ಳ
ಸರ್ಯಾಗಿ
ಕಾಣ್ತಿಯೆ
ಜೋ ನಿನ್ನತಾಮು
ನಿನ್ನೆಂಡ್ತಿಯಿದ್ರೆ
ನನ್ನೆಂಡ್ತಿಯ
ಸರ್ಯಾಗಿ
ಕಾಣ್ತಿಯೆ
ಜೋ ನಿನ್ನತಾಮು
ನಿನ್ನಗುಣಮನಯಿದ್ರೆ
ನನ್ನಗುಣಮನವ
ಸರ್ಯಾಗಿ
ಕಾಣ್ತಿಯೆ
ಜೋ ನಿನ್ನತಾಮು
ನನ್ನತಾಮಿರುದು
ಇಲ್ಲ್ದೆಹೋದ್ರೆ
ಸರ್ಯಾಗಿ
ಕಂಡಿಜಾ?
– ಮನಂ
*****