ಕೂಡ್ಲಿಗಿಯ ನೆಲಬೊಮ್ಮನಹಳ್ಳಿಯಲ್ಲಿ ಸಿಡಿಲಿಗೆ ಹದಿನೆಂಟು ಮೇಕೆ ಬಲಿ

ಕೂಡ್ಲಿಗಿ: ಬಿರುಸಿನ ಸಿಡಿಲ ಹೊಡೆತಕ್ಕೆ ಸೋಮವಾರ 18ಮೇಕೆಗಳು ಬಲಿಯಾದ ಘಟನೆ ತಾಲೂಕಿನ ನೆಲಬೊಮ್ಮನಹಳ್ಳಿಯಲ್ಲಿ ಸಂಭವಿಸಿದೆ.
ಮದ್ಯಾಹ್ನ ಸಿಡಿಲ ಹೊಡೆತಕ್ಕೆ ಭೀಮಸಮುದ್ರದ ಮನೆ ಮುಂದಿನ ತೆಂಗಿನಮರಕ್ಕೆ ಬೆಂಕಿ ಬಿದ್ದಿದೆ.
ಈಚೆಗಷ್ಟೇ ತಾಲೂಕಿನ ಗ್ರಾಮವೊಂದರ ಇಬ್ಬರು ಕುರಿಗಾಯಿಗಳನ್ನು ಸಿಡಿಲು ಬಲಿ ತೆಗೆದುಕೊಂಡ ಘಟನೆ ಮರೆಯುವ ಮುನ್ನವೇ ಈ ದುರ್ಘಟನೆ ನೆಲಬೊಮ್ಮನಹಳ್ಳಿ ಬಾಲರಾಜ ಎಂಬಾತನಿಗೆ ಸೇರಿದ ಮೇಕೆಗಳು ಬಲಿಯಾಗಿವೆ.
ಮದ್ಯಾಹ್ನ ಗ್ರಾಮದ ಹೊರವಲಯದ ಹೊಲಗಳ ಬದುವುಗಳಲ್ಲಿ ಮೇಯುತ್ತಿರುವಾಗ ಮಳೆ ಗಾಳಿ ರಭಸಕ್ಕೆ ಜೋರಾಗಿ ಬಡಿದ ಸಿಡಿಲು 18ಮೇಕೆಗಳ ಮೇಲೆರಗಿದೆ. ಸ್ಥಳದಲ್ಲೇ ಅವುಗಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಗುಡೇಕೋಟೆ ಪ್ರಭಾರಿ ಕಂದಾಯ ನಿರೀಕ್ಷಕ ಹರೀಶ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕರ್ನಾಟಕ ಕಹಳೆ ಡಾಟ್ ಕಾಮ್ ನ ಪ್ರತಿನಿಧಿ ಜತೆ ಮಾತನಾಡಿದ ಅವರು ಹೆಚ್ಚಿನ ಮಾಹಿತಿ ಪಡೆದು ತಹಸೀಲ್ದಾರ್ ಗೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ ಹಾಗೂ ತಾಲೂಕಿನ ಭೀಮಸಮುದ್ರದ ರುದ್ರಪ್ಪ ಎಂಬುವರ ಮನೆ ಮುಂದೆ ಇರುವ ತೆಂಗಿನಮರಕ್ಕೆ ಸಿಡಿಲು ಬಡಿದ ಪರಿಣಾಮ ಬೆಂಕಿಹತ್ತಿ ಉರಿಯುತ್ತಿದ್ದ ಮಾಹಿತಿ ತಿಳಿದಿದೆ ಎಂದರು.
*****