ಅನುದಿನ‌ಕವನ-೧೩೩, ಕವಯತ್ರಿ: ಆರ್. ಶೈಲಜಾ ಬಾಬು, ಚಿತ್ರದುರ್ಗ, ಕವನದ ಶೀರ್ಷಿಕೆ: ಜಾನಪದ

ಇಂದಿನ “ಅನುದಿನ ಕವನ” ದ ಗೌರವಕ್ಕೆ ನಿತ್ಯ ಬಸವಾದಿ ಶರಣರ ನೆನೆದು ಸ್ಪುರಿಸುವ
ನನ್ನುಸಿರ ಕವನಗಳಿಗೆ ಓದುಗರ ಮನವೆ ಸಾಕ್ಷಿ ಎಂದು ವಿನೀತಭಾವದಿಂದ ಹೇಳುವ ಕವಯತ್ರಿ, ಗೃಹಿಣಿ ಚಿತ್ರದುರ್ಗದ ಆರ್ ಶೈಲಜಾ ಬಾಬು ಅವರ ‘ಜಾನಪದ’ ಕವಿತೆ ಪಾತ್ರವಾಗಿದೆ.👇👇

ಜಾನಪದ

ಜಾನಪದ ಇದು ನಮ್ಮಜೀವನ ಪದ
ಜನರಿಂದ ಜನರಿಗಾಗಿ ಜನಿತದ ಪದ
ಜನರ ಬದುಕು ಜೀಕಿ ಮೂಡಿದ ಪದ
ಜನಮನ ಗೆಲ್ಲಿಸಲು ಜಾಣ ಜನಪದ

ಜಾಣ ಜನರಿಂದ ಪರಿವರ್ತನಾ ಸೂತ್ರ
ಬುಡಕಟ್ಟು ಜನರ ನಂಬಿಕೆ ಪಾಡು
ಹಿತಿಹಾಸ ಒಳಿತು ಕೆಡುಕ ಮೌಖಿಕ ಪಾತ್ರ
ನೀತಿ ಅನೀತಿಯ ಹೊರೆಹಚ್ಚುವ ಹಾಡು

ತಲೆತಲೆ ಮಾರಿಗೆ ತಂತಿಯಾದ ಗೋತ್ರ
ಬಣ್ಣಿಸಿ ರಾಗ ರಂಗಿನ ಜಾಗೃತ ಪದ
ವರಸೆಗಳ ವಿವರಿಸಿ ಸತ್ವಯುಕ್ತ ಪಾತ್ರ
ಮೂರ್ಖರ ಮನಸನೂ ತಟ್ಟಿದ ಪದ

ದ್ರಾವಿಡರಿಗೆ ದೈತ್ಯ ಶಕ್ತಿಯಾ ಭಕ್ತಿ ಜಾತ್ರಾ
ಹಾಡು ಕುಣಿತದ ಲಯದ ಮಟ್ಟು ಪದ
ಶಿಷ್ಟರ ನೆಚ್ಚದೆ ವಟ್ಟೆಯ ಮಾತಿನ ಮಂತ್ರ
ಸುಗ್ಗಿ ಮುಗಿಸಿದ ಖುಷಿಯ ಕೋಲು ಪದ

ವಿವಿದತೆಯ ವಿವರಿಸುವ ಲಕ್ಶ್ಯ ವಿಲಕ್ಷ್ಯ
ಹಾಡು ಕಟ್ಟುವ ಚಳುವಳಿ ಪದ
ದೈಹಿಕ ದೈವಿಕ ವಿಕೃತ ಸುಕೃತಗಳ ಸಂರಕ್ಷ
ಕಲಾ ವೈಖರಿಯ ಸಿರಿನಾಡ ಪದ

-✍ ಶೈಲಜಾ ಬಾಬು
ಚಿತ್ರದುರ್ಗ

*****