ಅನುದಿನ ಕವನ-೧೩೫ ಕವಯತ್ರಿ:ಹಬ್ಬಾ ಖಾತೂನ್ (ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ). ಕವನದ ಶೀರ್ಷಿಕೆ:ನಾನು ಆಡಲೆಂದೇ ಮನೆಯಿಂದ ಹೊರಬಂದೆ…

ನಾನು ಆಡಲೆಂದೇ ಮನೆಯಿಂದ ಹೊರಬಂದೆ

ನಾನು ಆಡಲೆಂದೇ ಮನೆಯಿಂದ ಹೊರಬಂದೆ ಮತ್ತು ಅದರಲ್ಲೇ ಮುಳುಗಿದೆ
ಹಗಲು ಪಶ್ಚಿಮದಲ್ಲಿ ಮುಳುಗುವವರೆಗೆ

ಯಾರು ನನಗೆ ಹೆಸರು ಮತ್ತು ಗೌರವವನ್ನು ನೀಡಿದರೋ
ಅಂಥ ಪ್ರತಿಷ್ಠಿತ ಮನೆಯಿಂದ ಬಂದಿದ್ದೇನೆ
ಎಷ್ಟೋ ಜನ ಪ್ರೇಮಿಗಳು ನನ್ನ ಸೂತ್ರದ ಗೊಂಬೆಯಾದರು
ಹಗಲು ಪಶ್ಚಿಮದಲ್ಲಿ ಮುಳುಗುವವರೆಗೆ

ಎಲ್ಲಿಯವರೆಗೆ ನಾನು ಮನೆಯಲ್ಲಿದ್ದೆನೋ ಅಲ್ಲಿಯವರೆಗೆ ಜಗತ್ತಿನ ನೋಟದಿಂದ ದೂರವಿದ್ದೆ
ಒಂದೇ ಒಂದು ಸಲ ನಾನು ಹೊರಗೆ ಬಂದೆ, ನನ್ನ ಹೆಸರು ಎಲ್ಲರ ನಾಲಗೆಯ ಮೇಲಿತ್ತು
ಸಾಧುಗಳು ನನ್ನ ನೋಡುವ ಬಯಕೆಯಿಂದ
ತಮ್ಮ ಸ್ವರೂಪವನ್ನೇ ಕಾಡಿನಲ್ಲಿ ಬಿಟ್ಟು ಬಂದರು

ಎಲ್ಲಿಯವರೆಗೆ ನನ್ನ ಅಂಗಡಿ ವಸ್ತುಗಳಿಂದ ತುಂಬಿತ್ತೋ
ಅಲ್ಲಿಯವರೆಗೆ ಇಡೀ ಜಗತ್ತು ಅದನ್ನು ನೋಡಲೆಂದೇ ವ್ಯಾಕುಲಗೊಂಡಿತ್ತು
ಯಾವಾಗ ಅಡವಿಟ್ಟ ನನ್ನ ಅಮೂಲ್ಯವಾದ ಪರಿಶುದ್ಧತೆ ಎಲ್ಲರೆದುರು ಬಂದಿತೋ
ಆಗ ಅವರ ಭಾವ ಬಿದ್ದುಹೋಯಿತು
ಹಗಲು ಪಶ್ಚಿಮದಲ್ಲಿ ಮುಳುಗುವವರೆಗೆ

ಹಬ್ಬಾ ಖಾತೂನ್
ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ
*****

ಸಿದ್ಧರಾಮ ಕೂಡ್ಲಿಗಿ