ಬಳ್ಳಾರಿ: ಬಡ, ಮಧ್ಯಮ ವರ್ಗದ ಜನರಿಗೆ ಪಲ್ಸ್ ಆಕ್ಸಿಮೀಟರ್, ಡಿಜಿಟಲ್ ಥರ್ಮಮೀಟರ್ ಮತ್ತು ಸ್ಟೀಮರ್ ಗಳನ್ನು ಅತ್ಯಂತ ಕಡಿಮೆ ದರದಲ್ಲಿ ವಿತರಿಸಲು ಮುಂದಾಗಿರುವ ಶಾಸನ ಸೇವಾ ಗುಂಪಿನ ಕಾರ್ಯ ಮಾದರಿ ಎಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ಹೇಳಿದರು.
ಅವರು ನಗರದ ಡಾ.ರಾಜ್ ರಸ್ತೆಯಲ್ಲಿರುವ ಬಿಡಿಎಎ ಮೈದಾನದಲ್ಲಿ ಬುಧವಾರ ಬೆಳಿಗ್ಗೆ ಅಗತ್ಯ ಡಿಜಿಟಲ್ ಪರಿಕರಗಳನ್ನ ಅತ್ಯಂತ ಕಡಿಮೆ ದರದಲ್ಲಿ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೋವಿಡ್ ಸೋಂಕಿನ ಸಂಕಷ್ಟದ ಸಂದರ್ಭದಲ್ಲಿ ಡಿಜಿಟಲ್ ಪರಿಕರಗಳಾದ ಪಲ್ಸ್ ಆಕ್ಸಿಮೀಟರ್ -450 ರೂ, ಡಿಜಿಟಲ್ ಥರ್ಮಮೀಟರ್ -150 ರೂ, ಸ್ಟೀಮರ್- 150 ರೂ, ಎನ್ -95 ಮಾಸ್ಕ್ -20 ರೂ.ಗೆ ಮಾರಾಟ ಮಾಡುತ್ತಿರುವುದು ನನಗೆ ಖುಷಿ ತಂದಿದೆ ಎಂದರು.
ಅತ್ಯಂತ ಕಡಿಮೆ ದರದಲ್ಲಿರುವ ಈ ವಸ್ತುಗಳ ಖರೀದಿಗೆ ಗಣಿನಾಡಿನ ಜನರು ಸರತಿ ಸಾಲಿನಲ್ಲಿ ನಿಂತುಕೊಂಡೇ ಖರೀದಿ ಮಾಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಜೈನ್ ಯುವಕ ಸಂಘದ ಪದಾಧಿಕಾರಿಗಳಾದ ಮನೋಜ್ ಜೈನ್, ರಿಷಭ್,ಪ್ರತೀಶ್, ವಿವೇಕ್,ಜಿಹೇಜ್ ,ದಿನೇಶ್ ಹಾಗು ಸಮಾಜದ ಹಿರಿಯರಾದ ಉಷಬ್ಲಾಲ್ ಬಾಗಿರಿಚ,ಅನೀಲ್,ರಾಜೇಶ್,ಬೇರುಲಾಲ್ ಮುಂತಾದವರು ಉಪಸ್ಥಿತರಿದ್ದರು
*****