ಅನುದಿನ ಕವನ-೧೪೨ ಕವಯತ್ರಿ:ಧರಣೀಪ್ರಿಯೆ ದಾವಣಗೆರೆ, ಕವನದ ಶೀರ್ಷಿಕೆ:ಬಾನ ರಂಗು

ಬಾನ ರಂಗು
(ತಲ ಷಟ್ಪದಿಯಲ್ಲಿ)
**********
ನೀಲಬಾನ
ಮ್ಯಾಲೆಚೆಂದ
ಸಾಲು ಬೆಳ್ಳಿ ಮೋಡವು|
ಖಾಲಿ ಮನವು
ತೇಲಿಬರಲು
ಸಾಲು ಹಕ್ಕಿ ಬಳಗವು||

ಪಸಿರಿನಿಂದ
ಬೆಸೆದು ಕಾನು
ಹುಸಿಯ ಮನಕೆ ಹರುಷವು|
ನಸುಕಿನಲ್ಲಿ
ಹೊಸೆದು ತರಣಿ
ತುಸುವೆಮಂಜ ಹನಿಗಳು||

ನಾಡ ಜನಕೆ
ಮೋಡಿ ಮಾಡಿ
ಹಾಡಿ ನಲಿವ ಕೋಗಿಲೆ|
ಗೂಡಬಿಟ್ಟು
ಜಾಡಹಿಡಿದು
ಕೂಡಿಕೊಳಲು ಸಂಗಡ||

ಹೊಗೆಯುಯಿಲ್ಲ
ಜಗವು ಮೌನ
ಸಿಗಲು ಶುದ್ಧ ಗಾಳಿಯು|
ಸೊಗಸು ಬಾನು
ಮಿಗಿಲು ಸಗ್ಗ
ಸಿಗುತ ಖುಷಿಯು ಮಂದಿಗೆ||

-ಧರಣೀಪ್ರಿಯೆ
ದಾವಣಗೆರೆ
*****