ವಿಜಯನಗರ (ಹೊಸಪೇಟೆ): ನಗರದಲ್ಲಿ ತರಕಾರಿ ಹಾಗೂ ಹಣ್ಣು ವ್ಯಾಪಾರಿಗಳು ಜಿಲ್ಲಾಡಳಿತ ಆದೇಶವನ್ನು ಉಲ್ಲಂಘಿಸಿ ದುಪ್ಪಟ್ಟ ಧರದಲ್ಲಿ ತರಕಾರಿ ಮತ್ತು ಹಣ್ಣು ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಹೊಸಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ದೂರಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಸಮಿತಿ ಅಧ್ಯಕ್ಷ ಭರತ್ ಕುಮಾರ್ ಸಿ ಆರ್ ಅವರು, ಬಳ್ಳಾರಿ ಜಿಲ್ಲಾಧಿಕಾರಿಗಳು ನಿಗದಿಪಡಿಸಿರುವ ಧರಗಳ ಆದೇಶವನ್ನು ತರಕಾರಿ, ಹಣ್ಣು ವ್ಯಾಪಾರಿಗಳು ಉಲ್ಲಂಘಿಸಿದ್ದಾರೆ ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತ ಬಳ್ಳಾರಿ ಹಾಗೂ ಹೊಸಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಾರ್ವಜನಿಕ ಮಾಹಿತಿಗಾಗಿ ನೀಡಿರುವ ಧರಪಟ್ಟಿಕ್ಕಿಂತಲೂ ಹೆಚ್ಚಿನ ಧರದಲ್ಲಿ ಮಾರಾ ಮಾಡುತ್ತಿದ್ದಾರೆ.
ಸೋಮವಾರ ಟಮೋಟ ಕೆಜಿಗೆ 40ರೂ, ಬದನೆಕಾಯಿ- ಕೆಜಿಗೆ 50ರೂ,ಕ್ಯಾರೆಟ್ ಕೆಜಿ 80ರೂ,ಮೆಣಸಿನ ಕಾಯಿ ಕೆಜಿ 50ರೂ ಗಳಿಗೆ ಮಾರಾಟ ಮಾಡುತ್ತಿರುವುದರಿಂದ
ಸಾರ್ವಜನಿಕರು ಪರಿತಪಿಸುವುಂತಾಗಿದೆ.
ರಾಜ್ಯ ಸರ್ಕಾರ ಲಾಕ್ ಡೌನ್ ಜಾರಿ ಮಾಡಿರುವುದರಿಂದ ಜನಸಾಮಾನ್ಯರು, ಬಡವರು ಕೆಲಸವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಕೂಲಿ ಕಾರ್ಮಿಕರು, ,ಬೀದಿ ಬದಿಯ ವ್ಯಾಪಾರಸ್ಥರು, , ದಿನಗೂಲಿಗಳ ಜೀವನ ಸಂಪೂರ್ಣವಾಗಿ ಕುಸಿದಿದೆ. ಇಂತಹ ಸಂದರ್ಭದಲ್ಲಿ ತರಕಾರಿ, ಹಣ್ಣು, ಅಗತ್ಯ ವಸ್ತುಗಳ ಏರಿಕೆ ಮತ್ತಷ್ಟು ತೊಂದರೆಗಳಿಗೆ ಆಹ್ವಾನಿಸಿದೆ.
ರಾಜ್ಯ ಸರ್ಕಾರ ಘೋಷಿಸಿರುವ ಧನ ಸಹಾಯವು ಕೂಡಾ ಉಪ್ಪು-ಹುಣಸೆ ಹಣ್ಣು ಖರೀದಿಸಲು ಆಗುತ್ತಿಲ್ಲ ಎಂದು ಭರತ್ ಕುಮಾರ್ ವ್ಯಂಗವಾಡಿದ್ದಾರೆ.
ಈ ಹಿಂದೆ ಘೋಷಿಸಿದ್ದ ಪ್ಯಾಕೇಜ್ ಕಾರ್ಮಿಕರಿಗೆ,ಆಟೋ-ಟ್ಯಾಕ್ಸಿ ಡ್ರೈವರ್ ಗಳಿಗೆ, ವಿವಿಧ ವರ್ಗದ ಫಲಾನುಭವಿಗಳಿಗೆ ಇನ್ನೂ ತಲುಪಿಲ್ಲ , ಈ ಬಾರಿಯೂ ತಲುಪುತ್ತದೆ ಎನ್ನುವುದು ಅನುಮಾನ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
*****