ಕೋವಿಡ್‍ ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಸಾವು:30ಲಕ್ಷ ಪರಿಹಾರ ವಿತರಣೆ

ಹೊಸಪೇಟೆ(ವಿಜಯನಗರ ಜಿಲ್ಲೆ): ಹೊಸಪೇಟೆ ನಗರದ 15ನೇ ವಾರ್ಡ-2ನೇ ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆ ಶಾರದಾ ಅವರು ಕಳೆದ ವರ್ಷ ಕೋವಿಡ್-19ರ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಮರಣಹೊಂದಿದ ಹಿನ್ನೆಲೆ ಅವರ ವಾರಸುದಾರರಿಗೆ 30 ಲಕ್ಷ ರೂ. ಮರಣ ಪರಿಹಾರ ವಿತರಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 30ಲಕ್ಷ ರೂ.ಗಳ ಮರಣ ಪರಿಹಾರವನ್ನು ಬುಧವಾರ
ಹುಡಾ ಅಧ್ಯಕ್ಷ ಅಶೋಕ್ ಜೀರೆ ಅವರು ಶಾರದಾ ಅವರ ಮಗಳಾದ ಉಷಾ ಅವರಿಗೆ ವಿತರಿಸಿದರು.
ಹೊಸಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಎಲಿಗಾರ್,ಮುಖಂಡರಾದ ಧರ್ಮೇಂದ್ರ ಸಿಂಗ್, ಸಂದೀಪ್‍ಸಿಂಗ್ ಮತ್ತಿತರರು ಇದ್ದರು.
*****