ಅನುದಿನ ಕವನ-೧೪೭ ಕವಿ:ಡಾ. ಸತೀಶ್ ಕುಮಾರ ಹೊಸಮನಿ, ಕವನದ ಶೀರ್ಷಿಕೆ: ಬೆಳಕಿನ ಸೂರ್ಯ

ಬೆಳಕಿನ ಸೂರ್ಯ
*****
ಲುಂಬಿನಿಯಲಿ ಹುಟ್ಟಿ
ಅಷ್ಟಾಂಗಿಕ ಮಾರ್ಗ
ತೋರಿಸಿದ ದಾರ್ಶನಿಕ
ದುಃಖದಿಂದ ಹೊರ ಬಾ ಎಂದು
ಧಮ್ಮ ತೋರಿಸಿದವನು

ಅರಿವಿನ ಗುರುವಾದೆ
ಮುಕ್ತಿ ಮಾರ್ಗವ ತೋರಿದೆ
ಜ್ಞಾನ ಯೋಗಿಯಾಗಿ
ಬೆಳಕ ನೀಡಿದೆ
ಶಾಂತಿ ನೆಮ್ಮದಿ ತೋರಿದೆ

ಕರುಣೆ ದಯೆ ಅನುಕಂಪ
ಪ್ರೀತಿ ಜ್ಞಾನ ದ ಅರಿವು ಮೂಡಿಸಿದೆ                      ಮನಸಿನ ಶುದ್ಧತೆ ತಿಳಿಸಿದೆ,                                       ಜ್ಞಾನ ಮಾರ್ಗವ ತೋರಿ                                     

ಬೆಳಕಿನ ಸೂರ್ಯನಾದೆ

ಕೋಪ ತಾಪ ಲೋಭ ಮದ
ಮತ್ಸರ, ಮೌಢ್ಯಗಳನ್ನು
ಜಯಿಸಿದ ಕರುಣಾಳು ಬೆಳಕೆ
ಪ್ರಜಾಪತಿ ಗೌತಮನಾಗಿ
ಕುಶೀನಗರದಲಿ ಲೀನವಾದೆಯಾ
ನಮ್ಮೆಲ್ಲರಿಗೂ ಬೆಳಕಿನ ಸೂರ್ಯನಾದೆ.

-ಡಾ.ಸತೀಶಕುಮಾರ ಹೊಸಮನಿ ಬೆಂಗಳೂರು.