ವಿದ್ಯಾರ್ಥಿ ಮೆಚ್ಚಿನ ಮಹಾಲಿಂಗನಗೌಡರ ವೃತ್ತಿಸೇವೆ ಇತರರಿಗೆ ಮಾದರಿ -ಡಿಡಿಪಿಯು ಎಂ.ವೀರೇಶಪ್ಪ ಬಣ್ಣನೆ

ಬಳ್ಳಾರಿ:ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಭದ್ರ ಬುನಾದಿ ಹಾಕಿ ಫಲಿತಾಂಶದ ಹೆಚ್ಚಳಕ್ಕೆ ಕಾರಣದವರು ಕೆ.ಎಂ.ಮಹಾಲಿಂಗನಗೌಡರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ(ಡಿಡಿಪಿಯು) ಎಂ.ವೀರೇಶಪ್ಪ ಅಭಿಪ್ರಾಯಪಟ್ಟರು.
ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಭಾನುವಾರ ಕಾಲೇಜಿನ ಪ್ರಾಂಶುಪಾಲರಾದ ಕೆ.ಎಂ.ಮಹಾಲಿಂಗನಗೌಡರ ವಯೋನಿವೃತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವೃತ್ತಿಯನ್ನು ಅರ್ಪಣಾ ಮನೋಭಾವದಿಂದ ಹೃತೂರ್ವಕವಾಗಿ ಮಾಡಿದ ಘನತೆ ಇವರಿಗೆ ಸಲ್ಲುತ್ತದೆ. ಗ್ರಾಮೀಣ ಭಾಗದಿಂದ ಬಂದು ಉನ್ನತ ಶಿಕ್ಷಣ ಪಡೆದು ಪ್ರೌಢಶಾಲಾ ಶಿಕ್ಷಕರಾಗಿ, ಉಪನ್ಯಾಸಕರಾಗಿ ಹಾಗೂ ಪ್ರಾಂಶುಪಾಲರಾಗಿ ಸಿಂಧನೂರು, ಕಂಪ್ಲಿ, ತೆಕ್ಕಲಕೋಟೆ, ಬಳ್ಳಾರಿಯಲ್ಲಿ ಕಾರ್ಯನಿರ್ವಹಿಸಿ ಅಪಾರ ವಿದ್ಯಾರ್ಥಿ ಬಳಗದ ಪ್ರೀತಿಗಳಿಸಿದ್ದಾರೆ. ಗ್ರಾಮೀಣ ಭಾಗದ ಹಾಗೂ ಬಡ ವಿದ್ಯಾರ್ಥಿಗಳಿಗೆ ಅಪಾರವಾದ ಬೆಂಬಲವಾಗಿ ನಿಂತು ಪ್ರೋತ್ಸಾಹಿಸಿ ಶಿಕ್ಷಣ ಕೊಡಿಸಿದ ಘನತೆ ಇವರಿಗೆ ಸಲ್ಲುತ್ತದೆ.
ವಿಶೇಷವಾಗಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜ್ ಬಳ್ಳಾರಿಗೆ ೨೦೧೮ರ ಡಿಸೆಂಬರ್‌ನಲ್ಲಿ ಬಂದು ೭೦೦ ಜನ ವಿದ್ಯಾರ್ಥಿಗಳಿದ್ದ ಕಾಲೇಜಿ ನಲ್ಲಿ ಸುಮಾರು ೨೦೦೦ ವಿದ್ಯಾರ್ಥಿಗಳನ್ನು ದಾಖಲಾಗುವಂತೆ ಮಾಡಿ, ಸರ್ಕಾರಿ ಕಾಲೇಜಿನಲ್ಲಿ ವಿಶೇಷವಾಗಿ ಬಾಲಕಿಯರ ಶಿಕ್ಷಣ ಪಡೆಯಲು ಶ್ರಮಿಸಿದ್ದಾರೆ. ಮಾತ್ರವಲ್ಲ, ಸುಮಾರು ೩೩ ಕೊಠಡಿಗಳ ಸುಮಾರು ೮ ಕೋಟಿ ರೂ ವೆಚ್ಚದ ಬೃಹತ್ ಕಾಲೇಜು ಕಟ್ಟಡ ನಿರ್ಮಾಣದಲ್ಲಿ ಅವರ ಬದ್ಧತೆ ಎದ್ದು ಕಾಣುತ್ತಿದೆ. ಇಂತಹ ಪ್ರಾಚಾರ್ಯರು ಇತರರಿಗೆ ಮಾದರಿ ಎಂದು ನುಡಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಕೆ.ಎಂ.ಮಹಾಲಿಂಗನಗೌಡರನ್ನು ಉಪನ್ಯಾದಕ ವೃಂದದ ಜತೆ ಹಂದ್ಯಾಳ್ ಶ್ರೀಮಹಾದೇವತಾತ ಕಲಾ ಸಂಘದ ಅಧ್ಯಕ್ಷ, ರಂಗಕಲಾವಿದ ಪುರುಷೋತ್ತಮಹಂದ್ಯಾಳ್, ಕಪ್ಪಗಲ್ಲು ಚಂದ್ರಶೇಖರ ಆಚಾರಿ ಸನ್ಮಾನಿಸಿ ಗೌರವಿಸಿದರು.
ಕಾಲೇಜಿನ ಉಪನ್ಯಾಸಕರಾದ ಶ್ರೀನಿವಾಸ ಮೂರ್ತಿ ಯು, ಬಿ.ಮಲ್ಲಿಕಾರ್ಜುನಗೌಡ, ಶ್ಯಾಮಣ್ಣ, ಚಾಂದ್‌ಪಾಷಾ, ಸತ್ಯಪ್ರಕಾಶ್, ಸ೦ಗಮೇಶ್ವರ್, ರೋಜಲಿನ್ ಮೇರಿ ಇತರರಿದ್ದರು.
ಕೋವಿಡ್೧೯ ನಿಯಮಗಳ ಅನುಸರಿಸಿ ಕೇವಲ ೨೦ ಜನ ಉಪನ್ಯಾಸಕರು, ಗಣ್ಯರ ನಡುವೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಕಾಲೇಜಿನ ಎಲ್ಲಾ ವಿಭಾಗದ ಉಪನ್ಯಾಸಕರಿದ್ದರು.
*****