ಬಳ್ಳಾರಿ:ಸರ್ಕಾರದ ಆದೇಶದಂತೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಾಸ್ಥಾನಗಳ ಅರ್ಚಕರಿಗೆ ಮತ್ತು ಸಿಬ್ಬಂದಿಗಳಿಗೆ ಶುಕ್ರವಾರ ಆಹಾರದ ಕಿಟ್ ವಿತರಿಸಲಾಯಿತು.
ಎ ಮತ್ತು ಬಿ ದರ್ಜೆಯ ದೇವಲಾಯಗಳಲ್ಲಿ ಲಭ್ಯವಿರುವ ಅಕ್ಕಿ ಮತ್ತು ದವಸ ಧಾನ್ಯಗಳು ಆಹಾರದ ಕಿಟ್ ರೂಪದಲ್ಲಿ ವಿತರಿಸುವಂತೆ ಸರ್ಕಾರ ಆದೇಶ ನೀಡಿತ್ತು. ಈ ನಿಟ್ಟಿನಲ್ಲಿ ಕನಕ ದುರ್ಗಮ್ಮ ಮತ್ತು ಬಸವೇಶ್ವರ ದೇವಸ್ಥಾನಗಳಲ್ಲಿ ಸಾಂಕೇತಿಕವಾಗಿ ಕೆಲ ಅರ್ಚಕರಿಗೆ ಸಹಾಯಕ ಆಯುಕ್ತ ಎಂ.ಎಚ್.ಪ್ರಕಾಶ್‌ರಾವ್ ಮತ್ತು ತಹಸೀಲ್ದಾರ ರೆಹಮಾನ್ ಪಾಷ ಆಹಾರದ ಕಿಟ್ ವಿತರಿಸಿದರು. ಉಳಿದ ಆಹಾರದ ಕಿಟ್‌ಗಳನ್ನು ತಾಲೂಕಿ ವಿವಿಧ ಗ್ರಾಮದ ದೇವಸ್ಥಾನದ ಅರ್ಚಕರಿಗೆ ನೀಡಲಾಗುವುದುಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನಕದುರ್ಗಮ್ಮದೇವಸ್ಥಾನದ ಪ್ರಧಾನ ಅರ್ಚಕರು ಹಾಗು ಬಳ್ಳಾರಿ ನಗರಪಾಲಿಕೆ ಸದಸ್ಯರು ಆದ ಪಿ.ಗಾದೆಪ್ಪ, ಪ್ರಮುಖರಾದ ಚಂದ್ರಕಲಾ, ದೇವಸ್ಥಾನದ ಕಾರ್ಯನಿರ್ವಹಕ ಅಧಿಕಾರಿಗಳಾದ ಹನುಮಂತಪ್ಪ ಇತರರಿದ್ದರು.
*****