ಸಿದ್ದ ಹಸ್ತ
*ಸಿದ್ದ* ಹಸ್ತದಾ ಪುರವಣಿ
*ಲಿಂಗೈಕ್ಯ ವಾಯಿತಯ್ಯ*
ಅವರೇ ಡಾ. ಸಿದ್ದಲಿಂಗಯ್ಯ
ಕನ್ನಡಮ್ಮನಲ್ಲಿ ಲೀನವಾದರಯ್ಯ.
ಬದುಕು ಮುಗಿಸಿ ಜೀವ
ಹಾರಿ ಹೋದರೇನು?
ನೋವುಂಡ ಬದುಕು
ನಿಟ್ಟುಸಿರ ತಾ ಬಿಡದೇನು.
ಕಿಚ್ಚಿನಲ್ಲಿ ದೇಹ ಬೆಂದು
ಬೂದಿಯಾದರೇನು?
ನೊಂದವರ ಬಾಳಿನ ದನಿಯಾಗಿ
ಕಹಳೆ ಊದಿದ ಪರಿಯೇನು.
ದೀಪ ತಾ ಶಾಂತವಾಗಿ
ಕತ್ತಲೆ ಆವರಿಸಿದರೇನು?
ಹೊತ್ತಿಸಿದ ಅಕ್ಷರ ಜ್ಯೋತಿ
ದೀನರ ಬಾಳು ಬೆಳಗದೇನು.
ಕಿಚ್ಚು ತಾ ತಣ್ಣಗಾಗಿ
ಅಸ್ಥಿತ್ವ ಇಲ್ಲವಾದರೇನು?
ಹರಿತ ಲೇಖನಿಯ ಪದಗಳು
ಗ್ರಂಥದಿ ಸ್ಥಿರತೆ ಪಡೆಯದೇನು.
ಬರೆವಣಿಗೆ ಕಿಚ್ಚಿನ ಕಾವು
ಕಾಯ ಅಳಿದರೂ ಉಳಿಯುವುದು
ನೀತಿಯ ಕೊಡುಗೆಗಳು ಚರಿತ್ರೆಯಾಗಿ
ನಿನ್ನೇ ಅಮರವಾಗಿಸಿತು.
✍🏻 ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ
*****