ಅನುದಿನ ಕವನ-೧೬೯, ಕವಿ:ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಸಂಬಂಧಗಳು

ಸಂಬಂಧಗಳು
*****
ಬಂಧಗಳೇ ಇಲ್ಲದ
ಸಂಬಂಧಗಳು ಈಗ
ತಂದೆ ಮಗ
ಅಣ್ಣ ತಮ್ಮ
ಗಂಡ ಹೆಂಡತಿ
ಈಗ ನಾಮಾಕಾವಸ್ಥೆ

ಕಕ್ಕುಲಾತಿ ಕರುಳ ಬಳ್ಳಿ
ಅಂತಃಕರಣ ಈಗೀಗ ಮಾತಿಗಷ್ಟೆ
ಜಾಲತಾಣದಲ್ಲಿ ವೀಕ್ಷಣೆ
ದೂರ ದೂರದಿಂದಲೇ
ಪ್ರೀತಿ ಪ್ರೇಮ ಪರಿವೀಕ್ಷಣೆ
ಗೂಗಲ್ ನಲ್ಲೆಎಲ್ಲಾ ತಪಾಸಣೆ
ನಡೆಯುತ್ತಿರುವಾಗ
ಅನಿವಾರಣೀಯ ಪರಿಸ್ಥಿತಿ ಯಲ್ಲಿ ಮಾತ್ರ ಸಂಭಾಷಣೆ
ಮುಖ ಪುಸ್ತಕದಲ್ಲಿಊಹೆಗೂ ಮೀರಿ ಗೆಳೆಯರ ಸಂಪಾದನೆ
ಮುಖಾಮುಖಿ ಭೇಟಿಯಿಲ್ಲ
ಉಪಚಾರದ ಮಾತೇಇಲ್ಲ
ಮಾಡಿದರೆ ಶೋಧನೆ
ಬಂಧಗಳೆ ಇಲ್ಲದ
ಸಂಬಂಧಗಳು ಈಗ
“ಕಾಲಾಯ ತಸ್ಮೈ ನಮಃ”

-ಪ್ರಕಾಶ್ ಮಲ್ಕಿಒಡೆಯರ್
ಹೂವಿನ ಹಡಗಲಿ