ಅನುದಿನ ಕವನ-೧೭೮, ಕವಿ: ನಾಗೇಶ್ ಜೆ. ನಾಯಕ, ಉಡಿಕೇರಿ, ಬೈಲಹೊಂಗಲ, ಕವನದ ಶೀರ್ಷಿಕೆ:ಗಜಲ್

ಗಜ಼ಲ್👇
*****
ದುನಿಯಾ ಕೆರಳಿ ನಿಂತರೂ ಅರಳುತಿದೆ ಮೊಹಬ್ಬತ್
ದುಶ್ಮನ್ ರಕ್ತ ಸುರಿಸಿದರೂ ನಗುತಲಿದೆ ಮೊಹಬ್ಬತ್

ಪ್ಯಾರ್ ಮುಗಿಸಲು ಏನೆಲ್ಲಾ ನಡೆದಿದೆ ಕಸರತ್ತು
ತಾಜ್ ಮಹಲ್ ಮೂಲಕ ಮಿನುಗುತಿದೆ ಮೊಹಬ್ಬತ್

ಮಂದಿರ-ಮಸೀದಿಗಳ ಮುರಿದು ಗಹಗಹಿಸಿದರೂ ಇನ್ಸಾನ್
ಎರಡು ಮನಸುಗಳ ನಡುವೆ ಉಸಿರಾಡುತಿದೆ ಮೊಹಬ್ಬತ್

ಧರ್ಮ ಜಾತಿಯ ಸೈತಾನ್ ಅದೆಷ್ಟೇ ಜೀವ ಹಿಂಡಿದರೂ
ಸಾಥ್ ಮುರಿಯದೆ ಸಾವಿನಲೂ ಒಂದಾಗುತಿದೆ ಮೊಹಬ್ಬತ್

ಇಶ್ಕ್ ಮುಗಿಸಲು ಹವಣಿಸಿದವರ ಬದುಕೇ ಮುಗಿದರೂ
ಬಯಸಿದವರ ಉಸಿರಲಿ ಸದಾ ನಳನಳಿಸುತಿದೆ ಮೊಹಬ್ಬತ್

¶ನಾಗೇಶ್ ಜೆ. ನಾಯಕ,  ಅಧ್ಯಾಪಕರು
ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆ,
ಉಡಿಕೇರಿ-೫೯೧೧೦೪
ಬೈಲಹೊಂಗಲ ತಾಲ್ಲೂಕು, ಬೆಳಗಾವಿ ಜಿಲ್ಲೆ.
ಮೊಬೈಲ್-೯೯೦೦೮೧೭೭೧೬

*****

[ದುನಿಯಾ-ಜಗತ್ತು, ಮೊಹಬ್ಬತ್-ಪ್ರೀತಿ, ದುಶ್ಮನ್-ಶತ್ರು, ಪ್ಯಾರ್-ಪ್ರೀತಿ, ಇನ್ಸಾನ್-ಮನುಷ್ಯ, ಸೈತಾನ್-ರಾಕ್ಷಸ, ಸಾಥ್-ಜೊತೆ ಇಶ್ಕ್-ಪ್ರೀತಿ]

*****

ನಾಗೇಶ್ ಜೆ ನಾಯಕ್