ನಾನು.. ನನ್ನ ಜೀವನ..
ಆಸಕ್ತಿ ಏನೂ ಇಲ್ಲ…
ಪ್ರಸಿದ್ಧಿ ಪಡೆಯಲು..
ನೀವೆಲ್ಲ ಗುರುತಿಸಿದ್ದೀರಿ,
ಸಾಕು , ಇಷ್ಟು.. ನನ್ನ ಪ್ರತಿಭೆಗೆ..
ಆರಕ್ಕೇರಲಿಲ್ಲ, ಮೂರಕ್ಕೆ ಇಳಿಯಲಿಲ್ಲ..
ಯಾರಿಗೆ ಎಷ್ಟು ಅವಶ್ಯಕತೆ ಇದೆಯೋ, ಅಷ್ಟು, ನನ್ನನ್ನು
ಗುರುತಿಸಿದರು, ಬಳಿಸಿದ ರು,
ನನಗೇನು ದುಃಖ ಇಲ್ಲ ಇದರಲ್ಲಿ..
ಕಾಲಯ ತಸ್ಮೈ ನಮಃ…
ಜೀವನದ ಸಿಹಿ ಕಹಿಗಳು,
ಸಮನಾಗಿ ಸ್ವೀಕರಿಸಿದೆ,
ರಾತ್ರಿಯ ಕತ್ತಲು, ಕಳೆದೇ.,
ಬೆಳಕು ಚೆಲ್ಲುವುದು..
ವಿಚಿತ್ರ ಜೀವನ ಇದು..!
ವಿಭಿನ್ನ ಜನರು…!
ಓದುವುದು, ಓಡುವ ದೂ…
ಗೆದ್ದರೆ, ಜನ ನಿನ್ನ ಹಿಂದೆ..
ನೀ ,ಸೋತರೆ, ನಿನ್ನ ತಳ್ಳಿ..
ಓಡುವ ಜನವಿದು..
ಈ ಜೀವನದ ಓಡಾಟದಲ್ಲಿ,
ದಣಿದು ಕುಳಿತೆ ,ಒಂದು ಮಣ್ಣಿನ
ದಿಬ್ಬಿ ಮೇಲೆ..
ನನ್ನ ಮೇಲೆ ನಂಬಿಕೆ ಇದೆ,
ದಿಮ್ಮಿಯ ಮಣ್ಣು ಕುಸಿಯುವ
ಮೊದಲು.. ದಿಮ್ಮಿಯಿಂದ ಇಳಿಯ ಬೇಕೆಂಬ ಬುದ್ಧಿ ಕೊಟ್ಟು, ಮರೆತಿದ್ದಾನೆ..
ಸಾಗರ…ಕಲಿತೆ ಬಹಳ..
ಅಲೆಗಳನ್ನು ಎ ಬ್ಬಿಸಿ, ಆನಂದ ಪಡೆಯಲು,
ನದಿಯಿಂದ ಕಲಿತೆ..
ತನ್ನಷ್ಟಕ್ಕೆ ತಾನು ಮುಂದೆ ಹರಿಯಲು..ಮುನ್ನುಗ್ಗಲು..
ಹಾಗೆಂದು ಬದುಕುವ ಆಸೆ ಇಲ್ಲ
ಎಂದಿಲ್ಲ..
ಆದರೆ ಈ ಮೋಸದಾಟ ದ ಬದುಕು..
ನನ್ನ ಮುಗ್ಧತೆಯ ದುರುಪಯೋಗ
ಪಡೆಯುವವ ರೆ ಹೆಚ್ಚು..
ಹಾಗೆಂದ ಮಾತ್ರಕ್ಕೆ ,ನಾನೆಂದೂ..
ನನ್ನ ಮಿತ್ರರನ್ನು ಮರೆತಿಲ್ಲ,
ವೈರಿಗಳನ್ನು ದ್ವೇಷಿಸ ಲೂ ಹೋಗಲಿಲ್ಲ..
ಕೈ ಗಡಿಯಾರ ಏನೊ ಖರೀದಿಸಿದೆ,
ಕಟ್ಟಿಕೊಂಡೂ ಆಯಿತು,
ಆದರೆ , ಕಾಲ, ನನ್ನ ಬೆನ್ನು ಬಿಡಲಿಲ್ಲ,
ದೇವ್ವಿನಂತೆ ಬೆನ್ನು ಹತ್ತಿತ್ತು..
ಆದರೆ,.. ನಾ ಕಾಲಕ್ಕೆ ತಕ್ಕಂತೆ ,
ತಾಳ ಹಾಕಲು ಯತ್ನಿಸಿದೇ..
ಮನೆ ಒಂದು ಕಟ್ಟಿದೆ..
ಸ್ವಂತಕ್ಕೆ ಏನೋ ಎಂಬಂತೆ,?
ಆದರೆ, ಕಟ್ಟಿದ ಸ್ವಂತ ಮನೆಯಲ್ಲಿ
ಯಾತ್ರಿಕನ ಜೀವನ ಸಾಗಿಸಿ ದೇ,
ವಿಶ್ರಾಂತಿಯ ಜೀವನ ದ ಆಸೆ..?
ಬಾಲ್ಯದ ನೆನಪು ಗಳು…
ಮರಳಿ ಬಾರದು ಗೆಳೆಯ ಆ ಜೀವನ ..
ಈ ಯಾಂತ್ರಿಕ ಜೀವನದಲ್ಲಿ,
ಸರಳ, ಸುಂದರ ಜೀವನ ವೆ
ಮರೆತು ಹೋಗಿದೆ ಗೆಳೆಯ…
ಅಂತಹ ಕಾಲ ಒಂದಿತ್ತು..
ನಗು ನಗುತ್ತಾ ಬೆಳಗಾಗುತಿತ್ತ..
ಈಗ ಮಂದ ಹಾಸ ವಿಲ್ಲದ ಸಂಜೆ..
ಕತ್ತಲೆಯಲ್ಲಿ ಅಂತ್ಯ ವಾಗುತ್ತಿದೆ,
ಬಹು ದೂರ ಸಾಗಿ ಬಂದೆವು,
ನನ್ನಷ್ಟಕ್ಕೆ ನಾನೇ ಕಳೆದು ಹೋಗಿದ್ದೇನೆ, ಈ ಸಂತೆಯಲ್ಲಿ..
ಜನ ಹೇಳುತ್ತಾರೆ..
ನಾನು ನಗುತ್ತೇನೆ, ನಗಿಸುತ್ತೇನೆ.. ಎಂದು..
ಆದರೆ.. ಅವರಿಗೇನು ಗೊತ್ತು..?
ನನ್ನ ಅಂತರಂಗದ ದುಃಖ..?
ಸ್ವಂತ ಜೀವನದ ಕಾಳಜಿ ಮಾಡುವ
ಮನಸ್ಸಿಲ್ಲ.
ಆದರೂ ಎಲ್ಲರ ಕಾಳಜಿ ಮಾಡುವ
ಮನಸ್ಸೂ ಇದೆ..
ಇದು ನನ್ನ ಕರ್ತವ್ಯ ಆಗದೆ ಮತ್ತೇನು..?
ಆನಂದಿಸುತ್ತೇನೆ, .. ಈ ಘಳಿಗೆಯನ್ನು..
ನನಗೂ ಗೊತ್ತು.. ನನ್ನ ಜೀವನದ ಮೌಲ್ಯ..!
ಈ ಅಮೂಲ್ಯ ಘಳಿಗೆಯ ವಿಶ್ವಾಸ ದಲ್ಲಿಯೇ ಜೀವಿಸುತ್ತೇನೆ..
ಸಮರಸವೇ ಜೀವನ..
ಇದುವೇ ಜೀವನ.. ಇದು ಜೀವನದ ತಿರುಳು…
-ಡಾ.ಉದಯ ಪಾಟೀಲ,
ನೇತ್ರ ತಜ್ಞರು,
ಕಲಬುರ್ಗಿ..
ಮೊಬೈಲ್: 9342018762.
*****
ಡಾ.ಉದಯ ಪಾಟೀಲ, ಕಲಬುರಗಿ