ಬಳ್ಳಾರಿ,ಜು.03: ಅಜೀಮ್ ಪ್ರೇಮ್‍ಜೀ ಪೌಂಡೇಷನ್ ವತಿಯಿಂದ ಕಾರ್ಮಿಕ ಇಲಾಖೆ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ ಮತ್ತು ಬಿ.ಡಿ.ಡಿ.ಎಸ್ ಬಾಲಕಾರ್ಮಿಕರ ತರಬೇತಿ ಕೇಂದ್ರದ ಸಹಯೋಗದಲ್ಲಿ ಬಿ.ಡಿ.ಡಿ.ಎಸ್. ಬಾಲಕಾರ್ಮಿಕರ ತರಬೇತಿ ಕೇಂದ್ರದಲ್ಲಿ ಓದುತ್ತಿರುವ ಬಾಲಕಾರ್ಮಿಕ ಮಕ್ಕಳ ಪೋಷಕರಿಗೆ ಆಹಾರ ಸಾಮಾಗ್ರಿ ಕಿಟ್‍ಗಳನ್ನು ಶನಿವಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಅಲ್ತಾಪ್ ಅಹಮ್ಮದ್, ನಿವೃತ್ತ ಕಾರ್ಮಿಕ ಅಧಿಕಾರಿ ಚಂದ್ರಶೇಖರ್ ಎನ್ ಐಲಿ, ಕಾರ್ಮಿಕ ನಿರೀಕ್ಷಕರಾದ ರಾಜೇಶ್, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯ ಜಿಲ್ಲಾ ಯೋಜನಾ ನಿರ್ದೇಶಕ ಎ.ಮೌನೇಶ್, ಬಿ.ಡಿ.ಡಿ.ಎಸ್. ಬಾಲಕಾರ್ಮಿಕ ತರಬೇತಿ ಕೇಂದ್ರದ ನಿರ್ದೇಶಕ ಫಾ.ಯಾಗಪ್ಪ ಮತ್ತು ಇತರರು ಇದ್ದರು.
*****