ಹಾವೇರಿಯಲ್ಲಿ ಸಂಜೀವಿನಿ ಸಂಸ್ಥೆಯಿಂದ ಡಾ.ಸುಭಾಷ್ ನಾಟೀಕರ್ ರಿಗೆ ಸನ್ಮಾನ

ಹಾವೇರಿ, ಜು.5: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಬಿ ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸುಭಾಷ್ ನಾಟೀಕರ್ ಅವರನ್ನು ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ
ಲೈಂಗಿಕ ಅಲ್ಪಸಂಖ್ಯಾತ ಸಮುದಾಯ ಹಾಗೂ
ಸಂಜೀವಿನಿ ಸಂಸ್ಥೆಯ ಪರವಾಗಿ ಅಕ್ಷತಾ ಕೆ.ಸಿ ಸತ್ಕರಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ, ಟಿ ಬಿ ಲಮಾಣಿ, ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಮ್ ಹೆಚ್ ಹೆಬ್ಬಾಳ, ಹಾವೇರಿ ಜಿಲ್ಲೆಯ ಸ್ನಾತಕೋತ್ತರ ಕೇಂದ್ರದ ಆಡಳಿತ ಅಧಿಕಾರಿ ಡಾ. ಪ್ರಶಾಂತ್ ಹೆಚ್ ವೈ, ಮುರಾರ್ಜಿ ದೇಸಾಯಿ ಕಾಲೇಜಿನ ಪ್ರಾಂಶುಪಾಲ ಡಾ. ಗಸ್ತಿ ಹಾಗೂ ವಿವಿದ ವಿಭಾಗಗಳ ಮುಖ್ಯಸ್ಥರು ಹಾಜರಿದ್ದರು.
*****