ಗಝಲ್
*********
ನನ್ನ ಮನದ ಹೊಸಿಲಿನಲ್ಲಿ ನಸು ನಾಚುತ
ಹೃದಯದೊಳಗೆ ಅಡಿಯಿಟ್ಟ ಹೃದಯೇಶ್ವರಿ ನೀನು //
ನನ್ನ ಬಾಳ ಬಾಂದಳದ ಮೊದಲ ಪುಟದಲ್ಲಿ
ಹೊಸ ಅಧ್ಯಾಯ ಬರೆದ ಅರ್ಧಾಂಗಿ ನೀನು //
ನನ್ನ ಮನೆ – ಮನವನರಿತು ಮರು ಮಾರ್ನುಡಿಯದೇ
ಸಹ್ಯದಲಿ ಸಹಕರಿಸುವ ಸಂಗಾತಿ ನೀನು //
ಸಪ್ತಪದಿ ತುಳಿದು ಹೆಜ್ಜೆಯೊಳು ಹೆಜ್ಜೆಯಿಟ್ಟು
ಸ್ಪೂರ್ತಿ ತುಂಬಿದ ಸಹದರ್ಮಿಣಿ ನೀನು //
ನನ್ನ ಮಕ್ಕಳೊಂದಿಗೆ ನನಗೂ ಆ ಸ್ಥಾನ ನೀಡಿದ
ಮಾಣಿಕ್ಯದಂತಹ ಮಾತೃಕೆ ನೀನು //
ನನ್ನ ನವ್ಯ ಕಲ್ಪನೆಗೆ ಕಣ್ಣ ಪಾಪೆಯಲ್ಲೇ
ಕಾಂತಿಯುತ ಚಾಲನೆ ನೀಡುವ ಭಾರ್ಯೆ ನೀನು //
ನನ್ನ ಗೃಹದಿ ಎಂದಿಗೂ ಬಾಳ ಬೆಳದಿಂಗಳಿನಂತೆ ಬಾಳಜ್ಯೋತಿ
ಬೆಳಗುವ ಅಪ್ಪಟ ಗೃಹಿಣಿ ನೀನು //
ನನ್ನ ಕೈಯ ಹಿಡಿದು ಕರ್ತವ್ಯದ ಕಡೆಗೆ
ಮುನ್ನಡೆಸುವ ಗಂಡನಿಗೆ ತಕ್ಕ ಹೆಂಡತಿ ನೀನು //
-ಶೋಭಾ ಮಲ್ಕಿ ಒಡೆಯರ್🖋
ಹೂವಿನ ಹಡಗಲಿ
*****
🖕ಸಾಹಿತ್ಯ: ಶೋಭ ಮಲ್ಕಿಒಡೆಯರ್
🖕ರಾಗಸಂಯೋಜನೆ-ಗಾಯನ: ಶಾರದ ಕೊಪ್ಪಳ, ಹಗರಿಬೊಮ್ಮನಹಳ್ಳಿ