ಯೌವನದಲ್ಲಿ….
*****
ಈಗ ನನ್ನ ಚಿತ್ತ
ಬರೀ
ಭೋರ್ಗರೆವ ಪ್ರೇಮ ವಾರಿಧಿ
ಕಲ್ಪ ನೆಯ ಚಂದಿರ
ವಯೋಭೂಮಿಕೆಯ ಮೇಲೆ
ತುಷಾರದ ಹನಿಗಳನ್ನು
ಎರಚಿ ಮೂಡಿ ಬಂದಾಗ
ಧುಮ್ಮಿಕ್ಕುವ ವಾಗ್ವೀಚಿಕೆಗಳು
ನಿನ್ನಲ್ಲಿ ಕಾಮನೆ ಮೂಡಿಸಬಹುದು
ಕನಸುಗಳ ಕೊನರಿಸಬಹುದು
ಆದರೆ ಗೆಳತೀ ನಿನಗೆ
ಗೊತ್ತಿಲ್ಲ ವೇನು?
ನಾನು ಗಂಡು ಬಲು ಭಂಡಜಾತಿ
ಕೊರಳು ಪದಕ ಅಧಿಕಾರ
ಹೊಂದುವ ತನಕ
ನಾssತವಕಿಸಿದರೂ
ನೀನು ತಾಳ್ಮೆತಪ್ಪಬೇಡ;ತಪ್ಪಿ
ನನ್ನ ಜರಿದರೆ
ಜನ ನಂಬುವುದಿಲ್ಲ; ನಗುತ್ತಾರೆ!
ಗೆಳತೀ_ssನೆನಪಿಡು
ನಗುವ ಜನ ನಿನ್ನನ್ನೇ ನೋಡುತ್ತಾರೆ!
-ಪ್ರಕಾಶ್ ಮಲ್ಕಿಒಡೆಯರ್
ಹೂವಿನ ಹಡಗಲಿ