ಒಲವು ಇಷ್ಟು ಬೇಗ ಮೂಡಬಾರದಿತ್ತು
ಒಲವು ಮೂಡುವ ಗಳಿಗೆ ಸುಂದರ
ಬಲು ಸುಂದರ ಬಲು ಮಧುರ
ಒಲವು ಅರಳುವ ಚೆಲುವು ಸುಂದರ
ಬಲು ಸುಂದರ ಬಲು ಮಧುರ
ಒಲವು ಇಷ್ಟು ಬೇಗ ಮೂಡಬಾರದಿತ್ತು
ಒಂದರ ನಂತರ ಒಂದಾಗಿ ಬರುವ
ಸುಂದರ ಕನಸುಗಳಂತೆ ಮೂಡುತ
ಕನಸುಗಳಲ್ಲೆ ಸಕಲ ಬದುಕು ಅರಳಿಸುವ
ನಮ್ಮ ನಡುವೆ ಕೆದರಿನಿಂತ ಒಲವು ಇ ಕಳೆ
ಒಲವು ಇಷ್ಟು ಬೇಗ ಮೂಡಬಾರದಿತ್ತು
ತಡವಾಗಿ ಒಲವು ಮೆಲ್ಲ ಮೆಲ್ಲನೆ ವಾಸನೆಯ
ಭೀರುತ್ತಾ ಭೀರುತ್ತಾ ಮೆಲ್ಲ-ಮೆಲ್ಲನೆ
ನಮ್ಮಿಬ್ಬರನ್ನು ಹತ್ತಿರಕ್ಕೆ ಒತ್ತರಿಸುತ್ತಾ
ಪ್ರೇಮದ ಬಿಸಿ ಹೆಚ್ಚಿಸುತ್ತಾ ಒಲವು ಅರಳಬೇಕಾಗಿತ್ತು
ಒಲವು ಇಷ್ಟು ಬೇಗ ಮೂಡಬಾರದಿತ್ತು
-ಮನಂ,
ಬೆಂಗಳೂರು
*****
🖕ಪ್ರೇಮ ಕವಿ:ಮನಂ
Super sir