ಕನ್ನಡ ವಿವಿ: ಎಂ.ಎ. ಸ್ನಾತಕೋತ್ತರ, ಡಿಪ್ಲೊಮಾ ವಿಭಾಗದ ತಾತ್ಕಾಲಿಕ ಫಲಿತಾಂಶ ಪ್ರಕಟ -ಡಾ.ಎನ್.ಚಿನ್ನಸ್ವಾಮಿ ಸೋಸಲೆ

ಬಳ್ಳಾರಿ, ಜು.15:ಕನ್ನಡ ವಿಶ್ವವಿದ್ಯಾಲಯ ದೂರ ಶಿಕ್ಷಣ ನಿರ್ದೇಶನಾಲಯದ 2019-20ನೇ ಸಾಲಿನ ವಿವಿಧ ಕೋರ್ಸ್‌ ಗಳಾದ ಎಂ.ಎ. ಸ್ನಾತಕೋತ್ತರ (ಕನ್ನಡ, ಚರಿತ್ರೆ, ಎಂ.ಜೆ.ಎಂ.ಸಿ. ಸಮಾಜಶಾಸ್ತ್ರ) ಮತ್ತು ಡಿಪ್ಲೊಮಾ (ಪುರಾತತ್ವ ಸಂಸ್ಕøತಿ ಮತ್ತು ಪ್ರವಾಸೋದ್ಯಮ, ಪತ್ರಿಕೋದ್ಯಮ, ನಾಟಕ ಕಲೆ, ಹಾಗೂ ಶಾಸನಶಾಸ್ತ್ರ) ಕೋರ್ಸ್‍ಗಳ ತಾತ್ಕಾಲಿಕ ಫಲಿತಾಂಶವನ್ನು ಕನ್ನಡ ವಿಶ್ವವಿದ್ಯಾಲಯದ ಅಧಿಕೃತ ಅಂತರ್ಜಾಲ www.kannadauniversity.org ನಲ್ಲಿ ಪ್ರಕಟಿಸಲಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯ ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರು ಡಾ.ಎನ್.ಚಿನ್ನಸ್ವಾಮಿ ಸೋಸಲೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ.ಚಿನ್ನಸ್ವಾಮಿ ಸೋಸಲೆ

*****