ಹಾಯ್ಕುಗಳು
೧
ದೇವರಿಗಾಗಿ
ದೇಶ ಸುತ್ತಿದ: ಅವ್ವ
ಮನೆಲಿದ್ದಳು.
೨
ಮಾತಿಗೊಂದರ್ಥ
ಮೌನವದು ಏಕಾಂಗಿ
ನಾನಾರ್ಥಕೋಶ.
೩
ಜಾಲಿ ಹೂವಿಗೂ
ಮುಡಿಗೇರೋ ಚಪಲ
ರಸಿಕತನ.
೪
ಗೋಲಗುಮ್ಮಟ
ತುಂಬೆಲ್ಲ ವಿರಹದ
ಪ್ರತಿಧ್ವನಿಯು.
೫
ದೇಶ ಕಟ್ಚುವ
ಮಾತಿರಲಿ: ದ್ವೇಷವ
ದಮನ ಮಾಡು.
೬
ರಕ್ತ ಹೀರುವ
ಜಿಗಣಿ ಸೊಳ್ಳೆಗೆ ನಿತ್ಯ
ಅಹಿಂಸಾ ಪಾಠ.
೭
ಬೆತ್ತಲೆಗರ್ಥ
ಹುಡುಕಹೋಗಿ ಆದ
ಅರೆಬೆತ್ತಲು.
೮
ನಕ್ಕಳವಳು
ಲೋಕತುಂಬ ಬೆಳಕು
ಚಂದ್ರದರ್ಶನ.
👉ಸಾಹಿತ್ಯ ಮತ್ತು ಚಿತ್ರಗಳು:
ಸಿದ್ಧಲಿಂಗಪ್ಪ ಬೀಳಗಿ
ಹುನಗುಂದ