ಅನುದಿನ ಕವನ-೧೯೮, ಕವಿ: ಕುಮಾರ ಸ್ವಾಮಿ ಹಿರೇಮಠ(ಅನ್ವರಿ), ವಿಶಾಖಪಟ್ಟಣ. ಕವನದ ಶೀರ್ಷಿಕೆ:ಕವಿಗಳ ದೃಷ್ಟಿಯಲ್ಲಿ ಸ್ನೇಹಿತ

ಕವಿಗಳ ದೃಷ್ಟಿಯಲ್ಲಿ ಸ್ನೇಹಿತ

ಸ್ನೇಹವೆಂಬ ಎರಡಕ್ಷರದಿ ಎಂಥಹ ಹಿತವಿದೆ
ಸ್ನೇಹ ಮತ್ತು ಹಿತದ ಸಂಬಂದವೇ ಸ್ನೇಹಿತ
ಒಬ್ಬರ ಇನ್ನೊಬ್ಬರನ್ನು ಅರಿತವನೆ ಸ್ನೇಹಿತ :-ಪ

ಕವಿಗಳಿಗೆ ಪುಸ್ತಕವೇ ಸ್ನೇಹಿತ
ಪುಸ್ತಕಕೆ ಕಥೆಗಳೇ ಸ್ನೇಹಿತ
ಕಥೆಗಳನೋದಿ ವಾಚಿಸುವ ಹೃದಯಗಳೇ ಸ್ನೇಹಿತ
ಹೃದಯಕ್ಕೆ ಸ್ಪಂದಿಸುವ ಜನಗಳೇ ಸ್ನೇಹಿತ -1

ಕವಿಗಳಿಗೆ ಲೇಖನಿಯೇ ಸ್ನೇಹಿತ
ಲೇಖನಿಗೆ ಬಿಳಿ ಹಾಳೆಯೇ ಸ್ನೇಹಿತ
ಬಿಳಿ ಹಾಳೆಯಲಿ ಮೂಡಿ ಬಂದ ಕವನವೇ ಸ್ನೇಹಿತ
ಕವನಕ್ಕೆ ರಾಗ ತಾಳವೇ ಸ್ನೇಹಿತ -2

ರಾಗ ತಾಳಕ್ಕೆ ರಾಗ ಸಂಯೋಜಕನೇ ಸ್ನೇಹಿತ
ರಾಗ ಸಂಯೋಜಕನಿಗೆ ಸಂಗೀತವೇ ಸ್ನೇಹಿತ
ಸಂಗೀತಕ್ಕೆ ಶಬ್ದ ಲಹರಿಯೇ ಸ್ನೇಹಿತ
ಶಬ್ದ ಲಹರಿಗೆ ಗಾಯಕನೇ ಸ್ನೇಹಿತ -3

ಗಾಯಕನಿಗೆ ಆಲೈಸುವವನೇ ಸ್ನೇಹಿತ
ಒಬ್ಬರಿಂದೊಬ್ಬರಿಗೆ ಸಹಕರಿಸುವವನೆ ಸ್ನೇಹಿತ
ಸ್ನೇಹದ ಈ ಬೆಸುಗೆಯೇ ಬಲು ಹಿತ
ಈ ಎಲ್ಲಾ ಸ್ನೇಹಿತರಿಗೆ ತಾಯಿ ಶಾರದೆಯೇ ಸ್ನೇಹಿತೆ -4

-ಕುಮಾರ ಸ್ವಾಮಿ ಹಿರೇಮಠ(ಅನ್ವರಿ)
ಸಿ ಐ ಎಸ್ ಎಫ್, ವಿಶಾಖಪಟ್ಟಣ
*****

🔷ಕುಮಾರ ಸ್ವಾಮಿ ಹಿರೇಮಠ(ಅನ್ವರಿ)