600ಕ್ಕೆ 600 ಅಂಕ ಪಡೆದ ವೀ.ವಿ. ಸಂಘದ ಸ್ವತಂತ್ರ ಪ.ಪೂ. ಕಾಲೇಜಿನ ದ್ವಿತೀಯ ಪ.ಪೂ. ವಿದ್ಯಾರ್ಥಿನಿ ಎಂ.ವಂದನ

.               ಎಂ ವಂದನಾ

ಬಳ್ಳಾರಿ: ನಗರದ ಪ್ರತಿಷ್ಠಿತ ವೀ.ವಿ. ಸಂಘದ ಸ್ವತಂತ್ರ ಪ.ಪೂ. ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಎಂ.ವಂದನ ದ್ವಿತೀಯ ಪ.ಪೂ. ಪರೀಕ್ಷೆಯಲ್ಲಿ 600ಕ್ಕೆ 600 ಅಂಕ ಪಡೆದು ದಾಖಲೆ ನಿರ್ಮಿಸುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ತಾಲೂಕಿನ ಕೆ.ವೀರಾಪುರ ಗ್ರಾಮದ ರೈತನ ಮಗಳ ಈ ಸಾಧನೆ ನಿಜಕ್ಕೂ ಪ್ರಶಂಸನೀಯ. ಇವರ ಈ ಯಶಸ್ಸಿಗೆ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಮಂಜುನಾಥ ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಏಳುಬೆಂಚಿ ರಾಜಶೇಖರ, ನಿಕಟಪೂರ್ವ ಅಧ್ಯಕ್ಷ ಡಾ.ಎಸ್.ಎಫ್. ಗಡ್ಡಿ ನಿಕಟಪೂರ್ವ ಆಡಳಿತ ಮಂಡಳಿ ಸದಸ್ಯರಾದ ಕೋಳೂರು ವೆಂಕಟೇಶ ಗೌಡರು, ಡಾ. ಎಸ್.ಬಿ. ರಾಜಶೇಖರ, ಹೆಚ್.ಕೆ. ಗೌರಿಶಂಕರ ಮತ್ತು ವೀ.ವಿ. ಸಂಘದ ಅಧ್ಯಕ್ಷ ಗುರುಸಿದ್ಧ ಸ್ವಾಮಿ, ಉಪಾಧ್ಯಕ್ಷ ಅಲ್ಲಂ ಚನ್ನಪ್ಪ, ಕಾರ್ಯದರ್ಶಿ ಬಿ.ವಿ. ಬಸವರಾಜ, ಜಂಟಿ ಕಾರ್ಯದರ್ಶಿ ದರೂರು ಶಾಂತನ ಗೌಡರು, ಕೋಶಾಧಿಕಾರಿ ಗೋನಾಳು ರಾಜಶೇಖರ ಗೌಡರು ವಿದ್ಯಾರ್ಥಿನಿ ವಂದನ ಅವರನ್ನು ಅಭಿನಂದಿಸಿದ್ದಾರೆ.
*****