ಅನುದಿನ ಕವನ-೨೦೩, ಕವಯತ್ರಿ:ಶೋಭ ಮಲ್ಕಿಒಡೆಯರ್, ಕವನದ ಶೀರ್ಷಿಕೆ: ಕವನ

 

ಕವನ

ಕವನಗಳ ಬರೆಯುವೆ
ಭಾವನೆಗಳಲಿ ಬೆರೆತು
ಬವಣೆಗಳ ಮರೆತು
ಬಿಳಿ ಹಾಳೆಯ ಪುಟದಲಿ
ಬರೆಯುವೆ ನಾ ಕವನ //

ನಿನ್ನೆ ನಾಳೆಗಳ ಮರೆತು
ವರ್ತಮಾನಗಳ ಕುರಿತು
ಹರುಷ – ಹರುಷದಿ
ವಿರಸವ ಮರೆಸುವ
ಬರೆಯುವೆ ನಾ ಕವನ //

ಯಾರ ಹೊಗಳಿಕೆಗಾಗಿ
ಯಾರ ತೆಗಳಿಕೆಗಾಗಿ ಅಲ್ಲ,
ಮನಸ್ಸಿನ ಮಾತಿಗೆ
ಲೇಖನಿ ಹಿಡಿಯುತ
ಬರೆಯುವೆ ನಾ ಕವನ //

ಮಾತಲಿ ಹೇಳದು
ಹೃದಯವು ತಾಳದು
ಭಾರದ ಮನಸ್ಸನ್ನು
ತಿಳಿಯಾಗಿಸಲು
ಬರೆಯುವೆ ನಾ ಕವನ //

ನನ್ನ ಬೆನ್ನನು ನಾನು ತಟ್ಟದೆ
ಹಿಗ್ಗು ಹರುಷವ
ಹೊರಗೆ ತೋರದೆ
ಮನದ ನೆಮ್ಮದಿಗೆ
ಬರೆಯುವೆ ನಾ ಕವನ //

-ಶೋಭಾ ಮಲ್ಕಿ ಒಡೆಯರ್*🖋
ಹೂವಿನ ಹಡಗಲಿ
*****

                 👆 ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ