ಡಾ. ಕೆ.ಎಂ ಮೇತ್ರಿ, ಕಮಲಮ್ಮ ರಿಗೆ ನಾಡೋಜ ಬುರ್ರಕಥಾ ಈರಮ್ಮ ಪ್ರಶಸ್ತಿ

👆ಡಾ. ಕೆ ಎಂ ಮೇತ್ರಿ

👆ಬುರ್ರಕಥಾ ಕಮಲಮ್ಮ

ಬಳ್ಳಾರಿ, ಆ. 7: 2021ನೇ ಸಾಲಿನ ‘ನಾಡೋಜ ಬುರ್ರಕಥಾ ಈರಮ್ಮ ಪ್ರಶಸ್ತಿ-೨೦೨೧’ ಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ ಕೆ ಎಂ ಮೇತ್ರಿ ಹಾಗೂ ರಾಯಚೂರಿನ ಬುರ್ರಕಥಾ ಕಲಾವಿದೆ ಶ್ರೀಮತಿ ಬುರ್ರಕಥಾ ಕಮಲಮ್ಮ ಅವರು ಭಾಜನರಾಗಿದ್ದಾರೆ.
ಸಂಡೂರು ತಾಲೂಕಿನ ಹಳೇ ದರೋಜಿ ಗ್ರಾಮದ ನಾಡೋಜ ಬುರ್ರಕಥಾ ಈರಮ್ಮ ಫೌಂಡೇಶನ್ ಪ್ರತಿವರ್ಷ ಜಾನಪದ, ಬುಡಕಟ್ಟು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಸಾಧಕರಿಗೆ ದರೋಜಿ ಈರಮ್ಮ ಅವರ ಪುಣ್ಯಸ್ಮರಣೆಯ ಆ. 12ರಂದು ಪ್ರಶಸ್ತಿ ನೀಡಿ ಗೌರವಿಸುತ್ತಿದೆ.


ಜಾನಪದ ಶ್ರೀ ದರೋಜಿ ಈರಮ್ಮ ಅವರ ಎರಡು ದಶಕಗಳ ಒಡನಾಡಿ ಪ್ರೊ. ಮೇತ್ರಿ ಅವರು ಶೋಷಿತ ಆದಿವಾಸಿ, ಬುಡಕಟ್ಟು ಸಮುದಾಯಗಳ ಜನರ ಏಳ್ಗೆಗೆ ಶ್ರಮಿಸಿದ್ದಾರೆ. ಕಮಲಮ್ಮ ಅವರು ಬುರ್ರಕಥಾ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿದ್ದಾರೆ ಎಂದು
ನಾಡೋಜ ಬುರ್ರಕಥಾ ಈರಮ್ಮ ಫೌಂಡೇಶನ್ ನ ಸಂಚಾಲಕ ಡಾ. ಅಶ್ವ ರಾಮು ಅವರು ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ತಿಳಿಸಿದ್ದಾರೆ.
*****