ಅನುದಿನ ಕವನ-೨೨೩, ಕವಿ; ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು….

*ಹಾಯ್ಕುಗಳು *


ಕಡುವೈರಿಯ
ಕಣ್ಣಲೂ ಕಾಣುತಿದೆ
ಪ್ರೀತಿ ಬೆಳಕು.

ಗೆದ್ದಲು ಮನೆ
ಸೇರಿದ ಹಾವು; ಗೆದ್ದು
ಸಂಭೃಮಿಸಿತು.

ಇಳಿವಯಸ್ಸು
ನೆನಪು ಮೈಲುಗಲ್ಲು
ಬಣ್ಣ ಮಾಸಿವೆ.

ಮಧುಹೀರುವ
ದುಂಬಿ ಚುಂಬನ; ಹೂಗೆ
ಹಿತಾನುಭವ.

ಬಣ್ಣದ ಮಾತು
ಬಹುಕಾಲ ಬಾಳವು
ಕ್ಷಣಿಕಾನಂದ.

ವಾರೆನೋಟಕೆ
ಸೋತು; ವಾರವಾದರೂ
ಮನೆ ಸೇರಿಲ್ಲ.

ನೇರ ಮಾತಿಗೆ
ಯಾರ ಹಂಗಿಲ್ಲ; ಸೂರ್ಯ
ಚಂದ್ರರೇ ಸಾಕ್ಷಿ.

ತಾಟಗಿತ್ತಿಯ
ತಾರೀಪಿನ ಸುಳಿಗೆ
ಸಾವಿರ ಬಲಿ.

ತನ್ನೊಡಲಲಿ
ಎಲ್ಲ ಇಟ್ಟುಕೊಂಡದ್ದು
ಸಮುದ್ರಗುಣ.
೧೦
ಕಸಿ ಮಾಡಿದ
ಕಲ್ಲು ಹೃದಯ; ಪ್ರೀತಿ
ಚಿಗುರಲಿಲ್ಲ.

– ಸಿದ್ಧಲಿಂಗಪ್ಪ ಬೀಳಗಿ
ಹುನಗುಂದ
*****