ಗಜಲ್….
ಯಾರದೋ ಬರುವಿಕೆಗಾಗಿ ಕಾಯುತಿರುವೆ
ಬನ್ನಿ ಹಾಗೆ,
ಚಹಾ ಕುಡಿಯುತ್ತಾ, ಏನಾದರು ಹರಟೋಣ… !
ಸಾಗುತ್ತಿದೆ
ವಯಸ್ಸು ಐವತ್ತರಂಚಿಗೆ…!
ಕಳೆದುಹೋದ ಜೀವನವ ಮತ್ತೆ ಸ್ವಾಗತಿಸೋಣ… !
ಯಾರು ಬರುವರು ಇನ್ನು, ನಮ್ಮ
ನೋಡಲಿಕ್ಕಿಲ್ಲಿ… !
ಒಬ್ಬರಿಗೊಬ್ಬರು ಕುಶಲೋಪರಿ ವಿಚಾರಿಸೋಣ… !
ಮಕ್ಕಳು ಬೆಳೆಯುತ್ತಿದ್ದಾರೆ, ನಮ್ಮಿಂದ
ದೂರವಾಗುತ್ತಿದ್ದಾರೆ… !
ಬನ್ನಿ ಮತ್ತೊಮ್ಮೆ ಸ್ನೇಹಿತರೊಂದಿಗೆ
ಸಂಪರ್ಕದಲ್ಲಿರೋಣ… !
ಗತಿಸಿಹೋದದ್ದು ಹೋಯಿತು… !
ಉಳಿದ ಜೀವನದಲ್ಲಿ ಒಬ್ಬರಿಗೊಬ್ಬರು ಪ್ರೀತಿಯ
ಹಂಚೋಣ… !
ಜೀವನ ತುಂಬಾ ಕೊಟ್ಟಿದೆ, ಒಳ್ಳೆಯದನ್ನೇ
ಕೊಟ್ಟಿದೆ… !
ಈ ಜೀವನಕ್ಕೆ ಒಂದು ಸಲ ಧನ್ಯವಾದ
ಹೇಳೋಣ… !
ಎಲ್ಲರ ಜೀವನವು ಹೀಗೆ, ಈ ಬದುಕಿನ… !
ಈ ಗಜಲಿನ ಹಾಗೆ… !
-ಹಿಂದಿ ಮೂಲ : ವಿಠಲ್ ರಾಜ್
ಕನ್ನಡ ಅನುವಾದ : ರಜನಿ ಕಾಂಬ್ಳೆ, ಬೆಳಗಾವಿ 👇
*****