ವಿಜಯನಗರ(ಹೊಸಪೇಟೆ) ಆ. 21: ವಿಶ್ವ ಪ್ರಸಿದ್ಧ ಹಂಪಿಯ ಸ್ಮಾರಕಗಳನ್ನು ವೀಕ್ಷಿಸಿದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಹರ್ಷ ವ್ಯಕ್ತಪಡಿಸಿದರು.
ಎರಡು ದಿನಗಳ ಹಂಪಿ, ತುಂಗಭಧ್ರಾ ಜಲಾಶಯ ವೀಕ್ಷಿಸಲು ಪತ್ನಿ ಶ್ರೀಮತಿ ಉಷಾ ಮತ್ತು ಕುಟುಂಬದ ಸದಸ್ಯರ ಜತೆ ಪ್ರವಾಸ ಕೈಗೊಂಡಿರುವ ಉಪರಾಷ್ಟ್ರಪತಿಗಳು ಶನಿವಾರ ಬೆಳಿಗ್ಗೆ ವಿಜಯ ವಿಠಲ ದೇವಸ್ಥಾನದ ಆವವರಣದಲ್ಲಿರುವ ಕಲ್ಲಿನ ತೇರು, ಸಪ್ತ ಸ್ವರ ಮಂಟಪ, ಕಮಲ್ ಮಹಲ್, ಮಹಾನವಮಿ ದಿಬ್ಬ ಮತ್ತಿತರ ಸ್ಮಾರಕಗಳನ್ನು ನೋಡಿ ಬೆರಗಾದರು.
ಇದಕ್ಕೂ ಮೊದಲು ಹಂಪಿ ವಿರೂಪಾಕ್ಷೇಶ್ವರ, ಪಂಪಾಂಬಿಕೆ ಹಾಗೂ ನಾಡದೇವತೆ ಶ್ರೀ ಭುವನೇಶ್ವರಿ ಅವರ ದರ್ಶನ ಪಡೆದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಮತ್ತು ಕುಟುಂಬ ಕೃತಾರ್ಥರಾದರು.