ಶ್ರಾವಣ ಬಂತು…..
ಭಣಭಣಗುಡುವ
ಒಣವೆಲ್ಲ ಮಣಿದು
ತೆನೆಗುಣ ಪಡೆದು
ಬಂತು ಶ್ರಾವಣ ತಂತು ಯೌವನ
ಕಣಕಣ ತಣಿದು
ಗಣಪತನ ಪಡೆದು
ಘನಗುಣವಾಡಿತು
ಬಂತು ಶ್ರಾವಣ ತಂತು ನವವನ
ತೆನೆಗುಣ ಹಾಲಾಗಿ
ತನುಕಾವ ನೂಲಾಗಿ
ಮನವನು ಬಿಗಿದು
ಬಂತು ಶ್ರಾವಣ ತಂತು ನವದಿನ
ಮನಕುಣಿವ ಭೂ
ವನ ನಲಿವ ಕಸವದು ರಸವಾಗಿ
ನವನವಾನ್ನ ಮಾಡುತ
ಬಂತು ಶ್ರಾವಣ ತಂತು ಗೆಲುವನ
ಮಣಮಣ್ಣಿನ ಹಬ್ಬಗಳು
ಮಣ್ಣೆ ಮಹಲ ಮುತ್ತಿದ ಘಮಲು
ಕಣ್ಣು ಕೊರೈಸುವ ಹಸಿರಹಾಸಿ
ಬಂತು ಶ್ರಾವಣ ತಂತು ಮುದವನ
-ವನಪ್ರಿಯ (ಯಲ್ಲಪ್ಪ ಹಂದ್ರಾಳ) ಮುಖ್ಯೋಪಾಧ್ಯಾಯರು, ಸರ್ಕಾರಿ ಪ್ರೌಢಶಾಲೆ ಹಿರೇರಾಯಕುಂಪಿ, ರಾಯಚೂರು ಜಿಲ್ಲಾ
ಇಲ್ಲಿ ಕವನವನ್ನು ಓದಿದ ಎಲ್ಲಾರಿಗೂ ತುಂಬಾ ಬಾಧನ್ಯವಾದಗಳು.. ಪ್ರಕಟಿಸಿದ ಮಂಜುನಾಥ ಸರ್ ಅವರಿಗೂ ಹಾಗೂ ಕನ್ನಡ ಕಹಳೆ ಬಳಗಕ್ಕೂ ನಮನಗಳು