ಅನುದಿನ ಕವನ-೨೪೨, ಕವಿ:ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು

ಹಾಯ್ಕುಗಳು


ಕಣ್ಣ ರೆಪ್ಪೆಗೂ
ನಿನ್ನದೇ ಧ್ಯಾನ ಸಖಿ
ಮುಚ್ಚಲೊಲ್ಲವು.

ಬೀಜ-ಭೂಮಿಯ
ಸಮ್ಮಿಲನದ ಫಲ
ಅಂಕುರದಾಟ.

ಹುಳಿಕಲಸಿ
ಉಂಡ ಕಿರುಬು ಪಾತ್ರೆ
ವಿಷಕಕ್ಕಿತು.

ತುಟಿ ಎರಡು
ಮಾಡದವ; ತೂರಿದ
ಪ್ರೀತಿ ಬೀಜವ.

ಮುಖಗವಸು
ಹಿಂದೆ; ತರತರದ
ಮುಖವಾಡವು.

ಉಗುಳುನುಂಗೂ
ಮಂದಿ ಕಡಿಮೆ ಆಗಿ
ಎಲ್ಲೆಡೆ ರಂಗು!

ಯೌವನಕದು
ಕಳೆ ಗೆಳತಿ; ನಿನ್ನ
ಮುಖಮೊಡವೆ.

ಮುಳ್ಳು ಚುಚ್ಚಿದ
ಚಪ್ಪಲಿಗಳು;ನಿತ್ಯ
ಅಳುತಲಿವೆ.

ಸೀಮೋಲ್ಲಂಘನ
ಸಿಟ್ಟಿಗೆ; ಬೀದಿನಾಯಿ
ಪ್ರತಿಭಟನೆ.
೧೦
ನೀನಿರದೇ ನಾ
ಇಲ್ಲ; ನಾ ಇದ್ದರದು
ಯಾವುದೂ ಇಲ್ಲ.

– ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ
*****