ಭೀಮನ ಬೆಳಕು
ಅರೆಹೊಟ್ಟೆಯಲ್ಲಿ ಸೊರಗಿದ ಭೀಮ
ಹೊಟ್ಟೆ ಬಟ್ಟೆಯ ಕಟ್ಟಿ ಓದಿದ ಭೀಮ
ರಮಾಬಾಯಿಂತ ಕರುಣಾಮಯಿ
ಜಗದಲ್ಲಿ ನಾವ್ಯಾರು ಕಂಡಿಲ್ಲ ತಾಯಿ
ದೇಶಕ್ಕಾಗಿ ನಿಮ್ಮ ತ್ಯಾಗ ಅಜರಾಮರ
ನಿಮ್ಮಯ ಮಮತೆ ನಮಗೆ ಸತ್ಯಕರ
ಯಾರು ಮಾಡದ ತ್ಯಾಗ ನೀನೆ ಮಾಡಿ
ಪತಿಯ ಸೇವೆಯಲ್ಲಿ ನಿನ್ನ ಕೈ ನೀಡಿ
ಭೀಮನಿಗಾಗಿ ಅದೆಷ್ಟು ತ್ಯಾಗಮಯಿ
ಓದಿಗೆ ನೀನೆ ಪ್ರೋತ್ಸಹದ ಕನ್ನಡಿ ತಾಯಿ
ಯುಗಗಳು ಮರೆಯದಂತ ಇತಿಹಾಸವು
ನಿಮ್ಮಿಬ್ಬರಲ್ಲಿ ಹುಟ್ಟಿದ ಸೃಷ್ಟಿಯ ಬರಹವು
ಸಾರಿ ಹೇಳುವೆ ಈ ದೇಶಕ್ಕೆ ಕಲ್ಪವೃಕ್ಷವೆ
ಜ್ಞಾನದ ಅಕ್ಷರಗಳ ಕೊಟ್ಟ ಬಹು ಸತ್ಯವೆ
ಹೋರಾಟ ಚೆಪ್ಪರ ಹಾಕಿ ನೆರಳಾದಿರಿ
ಶಿಕ್ಷಣ ಸಂಘಟನೆ ಕಟ್ಟಿ ವಿದ್ಯೆ ಕೊಟ್ಟಿರಿ
ಹೆಣ್ಣು ಎನ್ನುವ ಜೀವಕೆ ರಕ್ಷಣೆ ನೀಡುತ
ನಾಲ್ಕು ಗೋಡೆಯ ಕತ್ತಲಿಂದ ಹೊರಗೆ ಕರೆಯುತ
ಜ್ಞಾನದ ಬೆಳಕನ್ನು ಹಿಡಿದು ಅಕ್ಷರ ನೀಡುತ
ಮಹಿಳೆಯರಿಗು ಸ್ವತಂತ್ರವ ವಿದ್ಯೆ ಕಲಿಸುತ
ನಿಮ್ಮಿಬ್ಬರಿಗೆ ಬೆಳಕು ಆ ಜ್ಯೋತಿ ಬಾ ಫುಲೆ
ಸಾವಿತ್ರಿಬಾಯಿ ಫುಲೆಯಶಿಕ್ಷಣ ಕಲೆ
ಜಾತಿ ಎಂಬ ಕೊಳೆಯನು ನೀವೆ ತೊಳೆದು
ಅಜ್ಞಾನವ ಶುದ್ಧಿ ಮಾಡಿದ ಮಹಾನಾಯಕನು
-ಜಿ ಟಿ ಆರ್ ದುರ್ಗ
ಜಿ ಹೆಚ್ ಎಲ್, ಬಂಗಾರಪೇಟೆ, ಕೋಲಾರ ಜಿ.