ಅನುದಿನ ಕವನ-೨೪೭, ಕವಯತ್ರಿ:ಸ್ವಪ್ನ ಆರ್ ಎ, ಮುದ್ದಮಗುಡ್ಡಿ, ರಾಯಚೂರು ಜಿ., ಕವನದ ಶೀರ್ಷಿಕೆ:ಗುರುವಿಗೆ ನಮನ

 

ಶಿಕ್ಷಕರ ದಿನಾಚರಣೆಯ ಹಿನ್ನಲೆಯಲ್ಲಿ ಅಧ್ಯಾಪಕಿ ಸ್ವಪ್ನ ಎ ಆರ್ ಅವರು ಕವನದ ಮೂಲಕ ಗುರುವಿನ ಮಹತ್ವವನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಅನುದಿನ ಕವನದ ಇಂದಿನ ಗೌರವಕ್ಕೆ ಸ್ವಪ್ನ ಅವರ ‘ಗುರುವಿಗೆ ನಮನ’ ಕವಿತೆ ಪಾತ್ರವಾಗಿದೆ.
(ಸಂಪಾದಕರು)

ಗುರುವಿಗೆ ನಮನ…
(ವಿಶೇಷ ಸೂಚನೆ ಕನ್ನಡ ವರ್ಣಮಾಲೆಯಲ್ಲಿ ಗುರುವಿನ ವರ್ಣನೆ)

ಅನುದಿನ, ಅನುಕ್ಷಣ ಅನಂತ ಗುರುವೇ
ಆರಂಭದ ನುಡಿ ನಿಮ್ಮದೇ ಗುರುವೇ
ಇಳೆಗೆ ಬಂದ ರತ್ನವು ಗುರುವೇ
ಈಶ್ವರ ಸ್ವರೂಪಿ ನೀ ಗುರುವೇ
ಉದ್ಧಾರಕ ನೀ ಅನುಭವಿ ಗುರು ವೇ
ಊಟವ ಮಾಡದೇ ದುಡಿವ ಗುರುವೇ
ಋಣವ ತೀರಿಸಲಾಗದು
ಗುರುವೇ
ಎತ್ತರೆತ್ತರಕ್ಕೆ ಕೀರ್ತಿ ಪಡೆದ ಗುರುವೇ
ಏಳಿಗೆಗಾಗಿ ದುಡಿವ ನೀ
ಗುರುವೇ
ಐರಾವತ ಗುಣದವ ನೀ
ಗುರುವೇ
ಒಲೈಕೆಯಿಂದ ಪಾಠ ಹೇಳುವ ಗುರುವೇ
ಓದುತ್ತಾ ನಲಿಯುತ್ತ ಕಲಿಸುವ ಗುರುವೇ
ಔದಾರ್ಯ ಮೂರ್ತಿ ನೀ
ಗುರುವೇ
ಅಂತಃಕರಣದ ಶಿಲ್ಪಿ ನೀ
ಗುರುವೇ

ಕನ್ನಡಮ್ಮನ ಮುದ್ದು ಗುರು ವೇ
ಖಡ್ಗ ದಂತ ಮಾತು ನಿನ್ನದು ಗುರುವೇ
ಗಮನ ಸೆಳೆಯುವ ಗಮ್ಯತೆ ಗುರುವೇ
ಘಮಘಮಿಸುವ ಊಟವ
ಉಣಿಸೋ ಗುರುವೇ

ಚತುರ, ಚಾಣಕ್ಯ ನೀನು
ಗುರುವೇ
ಛಲಗಾರಿಕೆವುಳ್ಳ ನೀ ಗುರುವೇ
ಜನ ಜನಿತ ಹೆಸರು ನಿಮ್ಮದೇ ಗುರುವೇ
ಝಣ ಝಣ ಕಾಂಚಾಣ ಲೆಕ್ಕಿಸದ ಗುರುವೇ

ಟಾಟಾ ಮಾಡಿ ಕಳಿಸುವ
ಗುರುವೇ
ಠಸೆಯನ್ನು ಹಿಡಿದು ಕೆಲಸ ಮಾಡೋ ಗುರುವೇ

ಡಬಡಬ ಎನ್ನುವ ಹೃದಯದ ಚಿತ್ರ ಬಿಡಿಸುವ ಗುರುವೇ
ಢಣ ಢಣ ಗಂಟೆ ಬಾರಿಸುವ ಗುರುವೇ
ಮಣಭಾರದ ಕೆಲಸ ನಿನಗೆ ಗುರುವೇ

ತಕತಕನೇ ನವಿಲoತೆ ಕು ಣಿಯುವ ನೀ ಗುರು ವೇ
ಥಳಥಳ ಪಾತ್ರೆಗಳ ಶಾಲೆಗೆ ತoದಿಡುವ ಗುರುವೇ
ದಮನಿತರ ಮೂರ್ತಿ ನೀ
ಗುರುವೇ
ಧ್ವನಿಯಾಗಿ ಮಕ್ಕಳ ಬಾಳಲ್ಲಿ ಗುರುವೇ
ನಯವಿನಯತೆ ಸಾರಥಿ ನೀ ಗುರುವೇ

ಪಡಿಯಚ್ಚಿನ ಪೆಮ್ಮೆಯ ಕಳಸ ನೀ ಗುರುವೇ
ಫಲಕ ಮೇಲೆ ಬರೆದು ತಿಳಿಸುವ ಗುರುವೇ
ಬರಸಿಡಿಲಿನ ಕಷ್ಟಗಳಿದ್ದರೂ ನೀ ಜಗ್ಗದಿರುವ ಗುರುವೇ
ಭಕ್ತ ಶರಣರ ವಚನ ತಿಳಿಸುವ ನೀ ಗುರುವೇ
ಮಮತೆಯ ಮಡಿಲಿಗಿಂತ ಹೆಚ್ಚು ನೀ ಗುರುವೇ

ಯಮನ ಕರೆಗೂ ಒಮ್ಮೆ ಆಹುತಿ ನೀ ಗುರುವೇ
ರಮಿಸಿ ರಮಿಸಿ ಮುದ್ದು ಮಾಡುವ ನೀ ಗುರುವೇ
ಲವಲವಿಕೆಯಿಂದ ಮೌಲ್ಯಗಳ ತಿಳಿಸುವ ನೀ ಗುರುವೇ
ವoದಿಸುವ ಗುಣವುಳ್ಳ ನಿಸ್ವಾರ್ಥ ಜೀವ ನೀ ಗುರುವೇ
ಷಡ್ವರ್ಗ ಗೆದ್ದು ಬೀಗೀ ನಿಂತ ಗುರುವೇ
ಸದಾಚಾರಗಳ ಬಿತ್ತುವ ಪಯಣಿಗ ನೀ ಗುರುವೇ
ಹ ಪ ಹ ಪಿ ಸು ತ್ತಿ ರು ವ ಜ್ಞಾನ ದಾಹ ನಿನ್ನ ಮನ ಗುರುವೇ
ಮೇರೆ ಮೀರಿ ಕಲಿಸುವ ಪಂಡಿತ ನೀ ಗುರುವೇ
ಕ್ಷಣ ಕ್ಷಣಕ್ಕೂ ಕಾಳಜಿ ತೋರೋ ಹೃದಯವಂತ ನೀ ಗುರುವೇ
ಜ್ಞಾನದ ಸಪ್ತ ಋಷಿ ನೀ ಅನಂತ ಗುರುವೇ ಗುರುವೇ..

-ಸ್ವಪ್ನ ಆರ್. ಎ, ಸಹ ಶಿಕ್ಷಕಿ
ಉ. ಸ. ಹಿ. ಪ್ರಾ. ಶಾಲೆ, ಮುದ್ದಮಗುಡ್ಡಿ,
ಮಾನ್ವಿ ತಾಲೂಕು, ರಾಯಚೂರು ಜಿಲ್ಲೆ
*****