ಅನುದಿನ ಕವನ-೨೫೫, ಕವಯತ್ರಿ: ಡಾ. ಸೌಗಂಧಿಕಾ. ವಿ. ಜೋಯಿಸ್, ನಂಜನಗೂಡು, ಕಾವ್ಯ ಪ್ರಕಾರ: ಗಜಲ್

ಗಜಲ್

ಬಾಳ ಬಂಡಿಯ ರಥವು ಮುಂದೆ ಸಾಗಲು ಒಲವು      ಬೇಕು
ಬೀಸಲು ಬಿರುಗಾಳಿ ತರಗೆಲೆ ಉದುರಿ ಚಿಗುರಿಗೆ        ಕಾಲವು ಬೇಕು //

ಬಿಸಿಲು ಕನ್ನಡಿಯಲಿ ಬಿಂಬವು ಕಾಣದು ಎಂಬ    ಅರಿವಿರಲಿ
ಎಡರು ತೊಡರಿರಲಿ ಬೆಸೆದ ಬಂಧ ಬಿಡದಂಥ ಛಲವು ಬೇಕು //

ಸಿಲುಕಲು ಮೋಹದ ಬಲೆಯಲಿ ಕನಸೆಲ್ಲ ಗುರಿ ಸೇರಲಿ
ತಂಗಾಳಿ ಅಲೆಯಲಿ ಬದುಕಿನ ಯಾನದಲಿ ಇಂದು     ನಲಿವು ಬೇಕು //

ಸುಡು ಬೆಂಕಿಯಂಥ ಮನಸು ಯಾಕಾಗಿದೆ      ಸಹನೆಯಿರಲಿ ನಿನ್ನಲಿ
ಸ್ವಾರ್ಥವು ಇಲ್ಲದ ಪ್ರೀತಿ ಬೆಸುಗೆ ಇರುವ ಬಲವು         ಬೇಕು //

ಪ್ರಗತಿ ಪಥದಲಿ ಘಾಸಿಗೊಳಿಸಿ ಒತ್ತಡದ ಮಂದಿ   ಕಹಿತರಲಿ
ಪರದೆಯ ಮುಖವಾಡ ಕಳಚಿ ಜಯಿಸಿ ಸಾಧಿಸಲು  ಗೆಲುವು ಬೇಕು //

-ಡಾ. ಸೌಗಂಧಿಕಾ. ವಿ. ಜೋಯಿಸ್, ನಂಜನಗೂಡು
✍️🌹
*****