ಅನುದಿನ ಕವನ-೨೫೮, ಕವಯತ್ರಿ: ಸಹನಾ ಯಶವಂತ್ ಗೌಡ, ಮೈಸೂರು, ಕವನದ ಶೀರ್ಷಿಕೆ:ತಾರೆಗಳಲ್ಲಿ ಒಂದಾದ ಅಮ್ಮಾ….

ತಾರೆಗಳಲ್ಲಿ ಒಂದಾದ ಅಮ್ಮಾ..

ಮೊಗವ ತೋರದ ಬಾಲೆ ನಿಂತಿಹಳು,
ಆಕಾಶವನ್ನೇ ದಿಟ್ಟಿಸುತ್ತಾ ಕಾಯುತಿಹಳು//
ಅಮ್ಮ ಎಲ್ಲಿರುವೆ ಬಾ ಬೇಗ ಎನುತಿಹಳು,
ಅಪ್ಪಾ ಹೇಳಿದ ನಕ್ಷತ್ರ ವಾಗಿರುವೆ ನೀ, ಸೇರೊಮ್ಮೆ ನನ್ನ ಎಂದು ಬಿಕ್ಕುತಿಗಳು//

ಚಿಕ್ಕೆ ಸಾಲುಗಳ ಆಗಸದಿ ತುಂಬಾ,
ತೋರು ಬಾ ನಿನ್ನೆಯ ಬಿಂಬಾ//
ದ್ಯೋತಕ ನಕ್ಷತ್ರ ವಾಗೀ ನಿನ್ನ ಬರುವಕೆಯಿಂದ!
ಗಗನದಲ್ಲಿ ನೀ ನನ್ನ ಹರಿಸಲೇಂದಾ??

ತಾರೆಗಳ ನಾಡಿನಲ್ಲಿ ಹೊಂಗನಸಲಿ ಮಿನುಗುವಾಸೆ,
ತಣ್ಣನೆ ಗಾಳಿಯಲ್ಲಿ, ಬಾನಾಡಿಯಾಗಿ ನಿನ್ನ ಜೊತೆ ತೆಲಾಡುವಾಸೆ//
ಹುಣ್ಣಿಮೆ ಚಂದಿರನ ಬೆಳಕಲ್ಲಿ ನಿನ್ನ ಒಡಲಲಿ ತಲೆಯುರಿ ಹೊಂಗನಸು ಕಾಣುವಾಸೆ,
ನಿನ್ನ ಕರುಳ ಈ ಕೂಗಿಗೆ ಚಂದಮನೆ ನಿನ್ನ ಹೊತ್ತು ತಂದುನನ್ನೆದುರು ನಿಲ್ಲಿಸುತ್ತಾನೆ ಎಂಬ ಆಸೆ//

ತಣ್ಣನೆ ತಂಗಾಳಿ ಯಾಗಿ ವಾನಾಡಿಯಾಗಿ ಹಾರಿ ಬರಲಾ
ನಿನ್ನ ಕಣ್ ತುಂಬಿ ಮುದ್ದಾಡುವಾಸೇ, ನಾ ಗಗನ ಸಖಿಯಾಗಿ ಬಂದು ಬಿಡಲಾ//
ಕಪ್ಪಾದ ನಭದಲ್ಲಿ ಚಂದ್ರನ ಕೇಳಲಾ,
ನಾ ನೊಮ್ಮೆ ಸೇರಲೇ ಬೇಕು ನನ್ನ ಕರೆ ತರಲು ದೇವರನೆ ಕಳಿಸಿ ಬಿಡು ಎಂದು ಹೇಳಲಾ//

ಕೈಗೆ ಎಟುಕದ ಹೊಳೆಯುವ ಕುಸುಮ ವಾದೆ ನೀ
ಚುಕ್ಕೆಗಳ ಬೆಳ್ಳಿ ತಾರೆಯ ಚಿತ್ತಾರ ವಾದೇ ನೀ//
ಉಸಿರಿನ ಕೊನೆಗಳಿಗೆಯಲ್ಲಿಯು ನಿನ್ನ ಸ್ಪರ್ಶಕ್ಕೆ ಕಾಯುತ್ತಲೇ ಇರುವೆ ನಾ,
ನಾಳೆಯಿಂದ ನಿನ್ನ ಹುಡುಕಲು ಅಪ್ಪನನ್ನು ಕರ
ತರುವೆ ನಾ//

-ಸಹನಾ ಯಶವಂತ್ ಗೌಡ
ಕ ರಾ ಮು ವಿ, ಮೈಸೂರು