ಇಂದು ವಿಶ್ವ ಹೃದಯ ದಿನ: ಹೃದಯ ಆರೋಗ್ಯಕ್ಕಾಗಿ ಕರ್ನಾಟಕ ಕಹಳೆ ಡಾಟ್ ಕಾಮ್ ನ ಕಳಕಳಿ, [ಟಿಪ್ಸ್: ಸಿದ್ಧರಾಮ‌ಕೂಡ್ಲಿಗಿ]

ವಿಶ್ವ ಹೃದಯ ದಿನದ ಅಂಗವಾಗಿ ಸಾಹಿತಿ ಕೂಡ್ಲಿಗಿಯ ಸಿದ್ಧರಾಮ ಅವರು ಹೃದಯವನ್ನು ಆರೋಗ್ಯವಾಗಿಡಲು ಕೆಲವು ಸಲಹೆಗಳನ್ನು ನೀಡಿದ್ದಾರೆ. 👇

ನಿಮ್ಮ ಹೃದಯ ಚೆನ್ನಾಗಿರಬೇಕೆ ? ಈ ಕೆಳಗಿನವುಗಳನ್ನು ಅನುಸರಿಸಿ :

1. ಮನಸಿನಲ್ಲೊಂದು, ವಿಚಾರದಲ್ಲಿ ಮತ್ತೊಂದು ಮಾಡಬೇಡಿ. ಏನೇ ಇರಲಿ ಮನದ ಮಾತುಗಳನ್ನೇ ಮಾತನಾಡಿ
2. ಮನಸಿನ ತುಂಬಾ ಸರಳತೆ ಇರಲಿ, ಸಹಜತೆ ಇರಲಿ.
3. ಯಾರು ಏನೆಂದುಕೊಳ್ಳುವರೋ, ಏನು ಮಾಡಿಬಿಡುವರೋ ಎಂಬ ಗೊಂದಲಗಳಿಂದ ದೂರವಾಗಿರಿ. ಸರಿಯಾಗಿರುವುದನ್ನು ಸರಿ ಎಂದೇ ನಿರಾಳವಾಗಿರಿ
4. ಸಾಧ್ಯವಿದ್ದಷ್ಟೂ ಪ್ರಕೃತಿಯ ಜೊತೆಗಿರಿ, ಪ್ರಕೃತಿಯನ್ನು ಪ್ರೀತಿಸುವುದನ್ನು ರೂಢಿಸಿಕೊಳ್ಳಿ
5. ಕಾಂಕ್ರೀಟ್ ಕಟ್ಟಡಗಳಲ್ಲಿ ವಾಸಿಸುವರು ಮನೆಯಲ್ಲೊಂದು ಪುಟ್ಟ ಪುಟ್ಟ ಹೂ ಗಿಡಗಳನ್ನಿರಿಸಿಕೊಂಡು ಪ್ರತಿದಿನ ಮನಪೂರ್ವಕವಾಗಿ ಅವುಗಳೊಂದಿಗೆ ಮಾತನಾಡಿ
6. ಸಾಧ್ಯವಿದ್ದಷ್ಟು ಗೊಂದಲಗಳನ್ನುಂಟು ಮಾಡುವ ಜನರಿಂದ ದೂರವಿರಿ
7. ಯಾರು ಬಂದು ಯಾರ ಬಗ್ಗೆಯಾಗಲೀ ಅಥವಾ ನಿಮ್ಮ ಬಗ್ಗೆ ಬೇರೆಯವರು ಮಾತನಾಡಿದ್ದನ್ನು ಹೇಳಿದರೆ ಕಿವಿಕೊಡಬೇಡಿ. ಸಾಧ್ಯವಿದ್ದಷ್ಟು ಅವರನ್ನು ದೂರವಿಡಿ ಅಥವಾ ಆ ವಿಷಯಗಳ ಬಗ್ಗೆ ಯೊಚಿಸಲೇಬೇಡಿ
8. ಎಷ್ಟು ಸಾಧ್ಯವೋ ಅಷ್ಟು ಮನಸು ಖುಷಿಯಾಗಿರುವಂತೆ ನೋಡಿಕೊಳ್ಳಿ
9. ನಿಮಗೆ ಒತ್ತಡಗಳ ಕೆಲಸವಿದ್ದರೆ ಸಮಾಧಾನದಿಂದಲೇ ನಿರ್ವಹಿಸಿ, ಒತ್ತಡವೇ ಹೃದಯದ ತೊಂದರೆಗೆ ಕಾರಣ
10. ಯಾವುದು ಏನೇ ಸಂದರ್ಭ ಬಂದರೂ ಶಾಂತಚಿತ್ತರಾಗಿಯೇ ಎದುರಿಸಲು ಕಲಿಯಿರಿ. ಕೂಗಾಟ, ಚೀರಾಟ, ಹಾರಾಟಗಳಿಂದ ಸಮಸ್ಯೆ ಪರಿಹಾರವಾಗದು ಎಂಬುದು ಸದಾ ನೆನಪಿನಲ್ಲಿರಲಿ
11. ಪ್ರತಿದಿನ ತಪ್ಪದೇ ಬಿರುಸಾಗಿ ನಡೆಯಿರಿ. ನಡೆದಷ್ಟು ಕಾಲಿನ ರಕ್ತನಾಳಗಳು ರಕ್ತವನ್ನು ಪಂಪ್ ಮಾಡುವುದರಿಂದಾಗಿ ಹೃದಯದ ಕೆಲಸ ಹಗುರಾಗುತ್ತೆ
12. ನಿಮಗೆ ಯಾವುದು ಖುಷಿ ಕೊಡುವುದೋ ಬಿಡುವಿನ ವೇಳೆಯಲ್ಲಿ ಅದರಲ್ಲಿ ತೊಡಗಿಸಿಕೊಳ್ಳಿ. ಮನಸು ನಿರಾಳವಾದಷ್ಟೂ ಹೃದಯ ಆರೋಗ್ಯಪೂರ್ಣವಾಗಿರುತ್ತೆ.
13. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಅಂದರೆ ಚಿತ್ರಕಲೆ, ಹಾಡು, ಸಂಗೀತ, ಬರವಣಿಗೆ, ಫೋಟೋಗ್ರಫಿ, ಪ್ರವಾಸ……..ಇವು ಮನಸನ್ನು ಹಗುರಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
14. ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯದರ ಬಗ್ಗೆಯೇ ಯೋಚಿಸಿ. ಉಳಿದವರ ಬಗ್ಗೆ ಚಿಂತೆ ಬೇಡ. ನಾವು ಹೇಗಿರಬೇಕು ಎಂಬುದಷ್ಟೇ ಮುಖ್ಯ.

ಹುಟ್ಟಿನಿಂದ ಸಾವಿನವರೆಗೂ ವಿಶ್ರಾಂತಿಯೇ ಇರದಂತೆ ನಮಗಾಗಿ ನಿರಂತರವಾಗಿ ಕೆಲಸ ಮಾಡುವ ಹೃದಯದ ಕೆಲಸ ಅತ್ಯದ್ಭುತ. ಅದಕ್ಕೆ ಹೆಚ್ಚು ತೊಂದರೆ ಕೊಡಬಾರದು ಅಂದರೆ ಮೇಲಿನವುಗಳನ್ನು ಅನುಸರಿಸಿ. ಅದಕ್ಕೆ ತೊಂದರೆ ಕೊಟ್ಟರೆ ನಮಗೆ ತೊಂದರೆ ಕಟ್ಟಿಟ್ಟ ಬುತ್ತಿ

-ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿಲ್ಲೆ
*****