ನೂತನ ವಿಜಯನಗರ ಡಿಸಿಯಾಗಿ ಅನಿರುದ್ಧ ಪಿ ಶ್ರವಣ್, ಜಿಪಂ ಸಿಇಓ ಗಾಯತ್ರಿ, ಎಸ್.ಪಿ ಕೆ.ಅರುಣ್ ನೇಮಕ

ಹೊಸಪೇಟೆ (ವಿಜಯನಗರ): ನೂತನ‌ ವಿಜಯನಗರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆ.ಎಂ ಗಾಯತ್ರಿ ಅವರು ನೇಮಕವಾಗಿದ್ದಾರೆ.
ರಾಜ್ಯ ಸರ್ಕಾರ ಇಂದು (ಶುಕ್ರವಾರ) ಆದೇಶ ಹೊರಡಿಸಿದೆ.
ಗಾಯತ್ರಿ ಅವರು ಮೈಸೂರಿನ ಅಬ್ದುಲ್‌ ನಜೀರ್‌ ಸಾಬ್‌ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಂಸ್ಥೆಯ ನಿರ್ದೇಶಕಿಯಾಗಿದ್ದರು. ಗಾಯತ್ರಿ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಜಯನಗರ ಜಿಲ್ಲೆಗೆ ನೇಮಕ ಮಾಡಲಾಗಿದೆ.


ಗುರುವಾರ ನೂತನ ಜಿಲ್ಲಾಧಿಕಾರಿಯಾಗಿ ಅನಿರುದ್ಧ್‌ ಪಿ. ಶ್ರವಣ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ ಕೆ. ಅವರನ್ನು ಸರ್ಕಾರ ನೇಮಿಸಿತ್ತು.
ವಿಜಯನಗರ ಜಿಲ್ಲೆಯ ಉದ್ಘಾಟನಾ ಸಮಾರಂಭ ಶನಿವಾರ(ಅ.2)ರಂದು ನಡೆಯಲಿದೆ.
ಹೊಸ ಜಿಲ್ಲೆಯ ಮೂರು ಪ್ರಮುಖ ಹುದ್ದೆಗಳಿಗೆ ಅಧಿಕಾರಿಗಳ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದ್ದು ಜಿಲ್ಲೆಯ ಅಭಿವೃದ್ದಿಗೆ ವೇಗ ಪಡೆದುಕೊಳ್ಳಲು ಸಹಕಾರಿಯಾಗಿದೆ.
*****