ನೀವು ನಾವು….
ನೀವು ಬೇಲಿ ಹಚ್ಚಿ
ನಾವು ಹೂ ಬೆಳಸುತ್ತೇವೆ.
ಬೆಳದ ಹೂವಿನಿಂದ
ನಿಮ್ಮ ಬದುಕು ಬಂಗಾರವಾಗಲಿ.
ನೀವು ಬೆಂಕಿ ಹಚ್ಚಿ
ನಾವು ದೀಪ ಹಚ್ಚುತ್ತೇವೆ.
ಹಚ್ಚಿದ ದೀಪದಿಂದ
ನಿಮ್ಮ ದೇವರು ಶಾಂತವಾಗಲಿ.
ನೀವು ಮುಳ್ಳು ಹಾಸಿ
ನಾವು ಹೂವು ಹಾಸುತ್ತೇವೆ.
ಹಾಸಿದ ಹೂವಿನಿಂದ
ನಿಮ್ಮ ದಾರಿ ಸುಂದರವಾಗಲಿ.
ನೀವು ವಿಷವನ್ನೆ ಬಿತ್ತಿ
ನಾವು ಅಮೃತವ ಬೆಳಸುತ್ತೇವೆ.
ಬೆಳದ ಅಮೃತದಿಂದ
ನಿಮ್ಮ ಬದುಕು ಬಂಗಾರವಾಗಲಿ.
ನೀವು ಕೆಡುವುತ್ತಾ ಹೋಗಿ
ನಾವು ಕಟ್ಟುತ್ತಾ ಹೋಗುತ್ತೇವೆ
ನಾವು ಕಟ್ಟಿದ ಮನಮಹಲಿನಲಿ
ನಿಮ್ಮ ಮಕ್ಕಳು ಆಟವಾಡಲಿ
-ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ
ಶಿಕ್ಷಕರು, ಭೈರಾಪುರ, ಕೊಪ್ಪಳ
*****