ವಿ.ಅನೂಪ್ ಕೂಮಾರ್ ಅವರ ಜನ ಸಂಪರ್ಕ ಕಚೇರಿಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಉಚಿತ ‘ಇ-ಶ್ರಮ’ ನೋಂದಣಿ

ಬಳ್ಳಾರಿ, ಅ.18: ನಗರದ 38ನೇ ವಾರ್ಡಿನ ಬಿಜೆಪಿ ಯುವ ಮುಖಂಡ ವಿ.ಅನೂಪ್ ಕೂಮಾರ್ ಅವರ ಜನ ಸಂಪರ್ಕ ಕಚೇರಿಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಉಚಿತ ‘ಇ-ಶ್ರಮ’ ಕಾರ್ಡ್ ನೋಂದಣಿ ಕಾರ್ಯಕ್ರಮನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ರಾಬಾಕೋ ನಿರ್ದೇಶಕ ವೀರ ಶೇಖರ್ ರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರದ ಇ-ಶ್ರಮ ಕಾರ್ಡ್ ಮಾಡಿಸಿಕೊಂಡ ಅರ್ಹ ಅಸಂಘಟಿತ ಕಾರ್ಮಿಕರು ಅಪಘಾತದಲ್ಲಿ ಮೃತ ಪಟ್ಟರೆ ಅಥವಾ ಶಾಶ್ವತ ಅಂಗವಿಕಲತೆ ಉಂಟಾದರೆ ಎರಡು ಲಕ್ಷ ರೂಪಾಯಿ ಬರುತ್ತದೆ ಅಲ್ಲದೇ ಸಾಮಾನ್ಯ ಅಪಘಾತವಾದರೆ ಒಂದು ಲಕ್ಷ ರೂಪಾಯಿ ಪಡೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯ ಸಹ ಪಡೆಯಬಹುದಾಗಿದೆ ಎಂದರು.
ಯುವ ಮುಖಂಡ ವಿ.ಅನೂಪ್ ಕುಮಾರ್ ಮಾತನಾಡಿ ಭಾರತ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ 38ಕೋಟಿ ಅಸಂಘಟಿತ ಕಾರ್ಮಿಕರ ನೋಂದಣಿ ಕಾರ್ಯಕ್ರಮಕ್ಕೆ ಸರ್ಕಾರದಿಂದ ಚಾಲನೆ ನೀಡಲಾಗಿದೆ ಅದರಂತೆ ನಗರದಲ್ಲಿ ನಮ್ಮ ಕಚೇರಿಯಲ್ಲಿ ಸಹ ಚಾಲನೆ ನೀಡಿ ಇಂದೂ ನೂರಕ್ಕೂ ಹೆಚ್ಚು ಜನರಿಗೆ ಫಾರಂ ನೀಡಿಲಾಗಿದೆ ಕಚೇರಿಯಲ್ಲಿ ಪ್ರತಿದಿನ ನೊಂದಣಿ ನಡೆಯುತ್ತದೆ. ಅರ್ಹ ಸಾರ್ವಜನಿಕರು ಯಾರು ಬೇಕಾದರೂ ಇದರ ಸದುಪಯೋಗ ಪಡೆಯಬಹುದು ಎಂದರು.
ಈ ಸಂಧರ್ಭದಲ್ಲಿ ಕಾರ್ಪೂರೇಟರ್ ಹನುಮಂತು ಗೂಡಿಗಂಟೆ ಸುರೇಂದ್ರ , ಆಪ್ತ ಸಹಾಯಕ ರಾಮು, ಬಿಜೆಪಿ ಮುಖಂಡ ಭೀಮಲಿಂಗ, ಉಮೇಶ್, ಏಸು, ಯಶ್ವಂತ್, ಪಾಮಯ್ಯ ಮತ್ತಿತರರು ಇದ್ದರು.
*****