ಅನುದಿನ ಕವನ-೨೯೫, ಹಿರಿಯ ಕವಿ: ಸುಬ್ಬು ಹೊಲೆಯಾರ್, ಬೆಂಗಳೂರು, ಕವನದ ಶೀರ್ಷಿಕೆ:‌ ಅನ್ನದ ಮೇಲಿನ ಹೆಸರು…

ಅನ್ನದ ಮೇಲಿನ ಹೆಸರು…

ಅನ್ನವೆಂಬ ಜೀವವೆ
ನಿನ್ನೆದೆಯ ಮೇಲೆ ಸದಾ
ನನ್ನಂಥವರ ಹೆಸರಿರಲಿ

ದುಡಿಯುವ ಕೈಗಳ ಶಕ್ತಿ
ಕುಂದಿಸಬೇಡ, ಕಣ್ಣ ಬೆಳಕ
ನಂದಿಸಬೇಡ…

ಅನ್ನವೆ, ಅಧಿಕಾರಿಯಾಗಬೇಡ
ಮಾರುವ ಮಾಲೀಕನಾಗಬೇಡ
ದಣಿಯಾಗಬೇಡ, ದುಡಿಯುವವರ
ಜೀವನಾಡಿಯಾಗು.

ಅನ್ನವೆಂಬ ಜೀವವೆ
ನಿನ್ನೆದೆಯ ಮೇಲೆ ಸದಾ
ಹಸಿದವರ ಹೆಸರಿರಲಿ
ಕವಿಯದು ಕೊನೆಯದಾಗಿರಲಿ.

-ಸುಬ್ಬು ಹೊಲೆಯಾರ್, ಬೆಂಗಳೂರು

[ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ’ (ಪದ್ಯಗಳಸಂಕಲನದಿಂದ ಆಯ್ದು ಕೊಳ್ಳಲಾಗಿದೆ.) ಪ್ರಕಾಶಕರು: ಸಂಸ್ಕೃತಿ ಪ್ರಕಾಶನ, ಬಳ್ಳಾರಿ, ಪ್ರಕಟಣಾ ವರ್ಷ 2013)]
*****