ಕೂಡ್ಲಿಗಿ: ನಾಳೆ (ನ.11)ಗುಡೇಕೋಟೆಯ ಗಟ್ಟಿಗಿತ್ತಿ “ಒನಕೆ ಓಬವ್ವ” ಕೃತಿ ಲೋಕಾರ್ಪಣೆ

ಕೂಡ್ಲಿಗಿ, ನ.10: ತಾಲೂಕಿನ ಹಿರಿಯ ಪತ್ರಕರ್ತ, ಲೇಖಕ ಭೀಮಣ್ಣ ಗಜಾಪುರ ಅವರು ರಚಿಸಿರುವ ಗುಡೋಕೋಟೆಯ ಗಟ್ಟಿಗಿತ್ತಿ “ ಒನಕೆ ಓಬವ್ವ” ಕೃತಿ ಲೋಕಾರ್ಪಣೆ ಕಾರ್ಯಕ್ರಮ ಪಟ್ಟಣದ ಜ್ಞಾನಭಾರತಿ ಕಾಲೇಜಿನ ಸಭಾಂಗಣದಲ್ಲಿ ನ.11ರಂದು ಗುರುವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಗ್ರಂಥ ದಾನಿ ಸಂಜೆವಾಣಿ ಬಿ. ನಾಗರಾಜ ತಿಳಿಸಿದರು.
ಕೂಡ್ಲಿಗಿ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಾತನಾಡಿದ ನಾಗರಾಜ, ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಕೂಡ್ಲಿಗಿ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ಉದ್ಘಾಟಿಸುವರು. ಶ್ರೀ ಯಡೆಯೂರು ಸಿದ್ಧಲಿಂಗೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಎಂ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕೃತಿ ಬಿಡುಗಡೆ ಮಾಡುವರು.
ಪುಸ್ತಕದ ಕುರಿತು ಕನ್ನಡ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಮಾತನಾಡುವರು. ಲೇಖಕ ಭೀಮಣ್ಣ ಗಜಾಪುರ ಅವರು ಪ್ರಾಸ್ತಾವಿಕ ಮಾತನಾಡಲಿದ್ದಾರೆ ಎಂದು ತಿಳಿಸಿದರು.


ಮುಖ್ಯ ಅತಿಥಿಗಳಾಗಿ ಮುಖಂಡರಾದ ಗುಂಡುಮುಣುಗು ತಿಪ್ಪೇಸ್ವಾಮಿ, ಎಂ.ಗುರುಸಿದ್ಧನಗೌಡ, ಕೋಡಿಹಳ್ಳಿ ಭೀಮಪ್ಪ, ಬಂಗಾರು ಹನುಮಂತು, ಟಿ.ಜಿ.ನಾಗರಾಜ ಗೌಡ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ, ಮುಖಂಡರಾದ ಲೋಕೇಶ್ ವಿ.ನಾಯಕ, ಜರ್ಮಲಿ ಶಶಿಧರ, ಗುಜ್ಜಲ ರಘು, ಎನ್.ಟಿ.ತಮ್ಮಣ್ಣ, ಹುಡೇಂ ಪಾಪನಾಯಕ, ದೀನಾ ಮಂಜುನಾಥ, ಕೆ.ಎಚ್.ವೀರನಗೌಡ, ಸೂರ್ಯಪಾಪಣ್ಣ, ಗುಳಿಗಿ ವೀರೇಂದ್ರ, ಎನ್.ಎಂ.ನೂರ್ ಅಹ್ಮದ್, ಬಿ.ಭೀಮೇಶ್, ಕಾವಲ್ಲಿ ಶಿವಪ್ಪನಾಯಕ, ಹಿರಿಯ ರಂಗನಟಿ ಪಿ.ಪದ್ಮಾ, ಪ್ರಾಚಾರ್ಯ ಡಾ.ರಾಜಣ್ಣ ಗುಡೇಕೋಟೆ, ತಾಪಂ ಅಧ್ಯಕ್ಷೆ ನಾಗರತ್ನಮ್ಮ ಲಿಂಗಪ್ಪ, ಮಾಜಿ ಅಧ್ಯಕ್ಷೆ ಸರೋಜಾ ಸೂರ್ಯಪಾಪಣ್ಣ, ಉದಯ ಜನ್ನು, ಅಂಬಾಡಿ ನಾಗರಾಜ, ಕೋಗಳಿ ಮಂಜುನಾಥ, ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಸುರೇಶ್ ವಿಕ್ಟರಿ, ಛಲವಾದಿ ಮಹಾಸಭಾ ಅಧ್ಯಕ್ಷ ಅಮ್ಮನಕೆರೆ ಕೊಟ್ರೇಶ್, ತಾಪಂ ಸದಸ್ಯ ಅಮಲಾಪುರ ಬಸವರಾಜ, ಹಿರಿಯ ಪತ್ರಕರ್ತ ಸಿ.ಮಂಜುನಾಥ, ಮುಖಂಡರಾದ ಹಾರಕಬಾವಿ ಕಪಾಳಿ ಈಶ್ವರಪ್ಪ, ಕಣವಿಹಳ್ಳಿ ಮಂಜುನಾಥ, ದಸಂಸ ವಿಜಯನಗರ ಜಿಲ್ಲಾ ಸಂಚಾಲಕ ಎಸ್.ದುರುಗೇಶ್, ಕೃಷಿಕ ಸಮಾಜದ ಅಧ್ಯಕ್ಷ ಬಣವಿಕಲ್ ಯರಿಸ್ವಾಮಿ, ಮೈದಾನ ಗೆಳೆಯರ ಬಳಗದ ಎಂ.ಕೆ.ಬಸವರಾಜ, ಜೆಸಿಐ ಅಬೂಬ್‌ಕರ್ ಭಾಗವಹಿಸುವರು.
ಅಲ್ಲದೆ, ವಿಶೇಷ ಆಹ್ವಾನಿತರಾಗಿ ಪ್ರೊಬೇಷನರಿ ಅಸಿಸ್ಟೆಂಟ್ ಕಮಿಷನರ್ ಹುಲ್ಲಮನಿ ತಿಮ್ಮಣ್ಣ, ಕೂಡ್ಲಿಗಿ ತಹಸೀಲ್ದಾರ್ ಟಿ.ಜಗದೀಶ್, ತಾಪಂ ಇಒ ಜಿ.ಎಂ.ಬಸಣ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಾಲ್ತೂರು ಶಿವರಾಜ, ಬಿಇಒ ಉಮಾದೇವಿ, ಡಿವೈಎಸ್‌ಪಿ ಹರೀಶ್‌ರೆಡ್ಡಿ, ಸಿಪಿಐ ವಸಂತ ವಿ.ಅಸೋದೆ, ಪಿಎಸ್‌ಐ ಶರತ್ ಕುಮಾರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಎಇಇ ಮಲ್ಲಿಕಾರ್ಜುನ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿಜಯನಗರ ಜಿಲ್ಲಾ ಕಾರ್ಯದರ್ಶಿ ಬಿ.ಬಿ.ಶಿವಾನಂದ ಹಾಗೂ ಕೊಟ್ಟೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಣಜಿ ಸಿದ್ಲಿಂಗಪ್ಪ ಭಾಗವಹಿಸುವರು ಎಂದು ನಾಗರಾಜ ವಿವರಿಸಿದರು.


*****