ಬಳ್ಳಾರಿ, ನ.19: ನವದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಪದ್ಮಶ್ರೀ ಗೌರವ ಸ್ವಿಕರಿಸಿದ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ಅವರನ್ನು ನಗರದಲ್ಲಿ ಸತ್ಕರಿಸಿ ಗೌರವಿಸಲಾಯಿತು.
ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬುಧವಾರ ನಗರಕ್ಕೆ ಆಗಮಿಸಿದ್ದ ಮಂಜಮ್ಮ ಜೋಗತಿ ಅವರನ್ನು ರಂಗಕಲಾವಿದ ಪುರುಷೋತ್ತಮ ಹಂದ್ಯಾಳ್ ಅವರ ಕುಟುಂಬ ಆತ್ಮೀಯವಾಗಿ ಮನೆಗೆ ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಿತು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಬಳ್ಳಾರಿಗೆ ಬಂದ ನನ್ನನ್ನು ಪ್ರೀತಿಯಿಂದ ಬರಮಾಡಿಕೊಂಡು ಸತ್ಕರಿಸಿದ ಪುರುಷೋತ್ತಮ ಹಂದ್ಯಾಳ ಅವರ ಕುಟುಂಬದ ಸಹೃದಯತೆ ಮೆಚ್ಚಿಗೆಯಾಯ್ತು ಎಂದು ಮಂಜಮ್ಮ ಜೋಗತಿ ಹರ್ಷ ವ್ಯಕ್ತಪಡಿಸಿದರು.
ಬಳಿಕ ಹಯಗ್ರೀವ ಮನೆಯ ಪಾಠ ಶಾಲೆಯ ಮಕ್ಕಳೊಂದಿಗೆ ಮಂಜಮ್ಮ ಒಡನಾಡಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಪ್ರಭುದೇವ ಕಪ್ಪಗಲ್ಲು, ರಂಗತೋರಣದ ಅಡವಿಸ್ವಾಮಿ, ಮಲ್ಲೇಶ್, ವಿಡಿಯೋ ಜರ್ನಲಿಸ್ಟ್ ಲುಕ್ಮಾನ್, , ಉಮಾ ಪುರುಷೋತ್ತಮ್, ಹಂದ್ಯಾಳ್ ಲಿಂಗಾರೆಡ್ಡಿ ದಂಪತಿ, ಅಧ್ಯಾಪಕಿಯರಾದ ಭಾರತಿ ಜಿ.ಪಿ, ಸಾಯಿಶೃತಿ ಜಿ.ಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
*****