ಒಲವ ಹೂ
ನೀನು ಇರದೆ
ಜೀವ ಇರದು
ನೀನು ಬರದೆ
ಜೀವ ಬರದು
ಜೀವ ಭಾವನೀನಾಗಿರಲು
ಉಸಿರಲಿ ಉಸಿರಾಡುವುದು
ನಾನು ನೀನು
ಎದೆಯ ಬೇರು
ಬಾಳಲು ಬೆಳೆಯಲು
ಹಸಿರು ಹೊನ್ನು
ಉಸಿರಳಿದು ಹೆಸರುಳಿಯಲು
ನಿನ್ನೀ ಜನುಮ ಸಾರ್ಥಕವು!
ಸುಡುವ ನೆಲದಿ
ಸುರಿವ ಮಳೆಯು
ಎದೆಗೆ ಎಸೆಯುವುದು
ಕರಳ ತಂಪು
ಮುರಿದೋದ ಬಂಧದಲ್ಲಿ
ಒಲವೇ ಹೂಗಳು
-ಡಾ.ಸದಾಶಿವ ದೊಡ್ಡಮನಿ, ಇಳಕಲ್
*****