ಜಾದೂ
ಶೃಂಗಾರ ಗೊಂಡ ಕೆರಳಿದ ಕೇಶ
ಅರಳಿದ ಆಸೆ ಕಂಗಳು
ಕುತುಹಲಭರಿತ ನೋಟ !
ಅಂಗೈಯಲ್ಲಿದೆ ಜ್ಞಾನ
ಬೆರಳಲ್ಲಾಡಿಸುವ ಜಾಣ್ಮೆ
ಮಾಯಾಂಗನೆ ಪ್ರಪಂಚ !
ಪ್ರತೀಕ್ಷಣ ಹೊಸತನ ಹುಡುಕಾಟ
ಎಲ್ಲರಿಂದಲೂ ಕೇಂದ್ರೀಕೃತ ಆಕ್ರಮಣ
ಖುಷಿ ತಂದಿದೆ ಗೆಳೆಯರ ಬಂಧನ !
ಜಗತ್ತನ್ನೇ ತನ್ನತ್ತ ಆಕರ್ಷಿಸಿ
ಗರ್ಭದಲ್ಲಿ ಮರೆಮಾಚಿ
ಎಲ್ಲರಿಗೂ ಮೋಡಿ ಮಾಡಿದ ಜಾದೂ !
ಜನ ಸಾಮಾನ್ಯರ ಶ್ರೀಮಂತಿಕೆ ಅದ್ಬುತ
ಎಳೆಯರ ಸಾಮ್ರಾಜ್ಯದ ಯುವ ರಾಜ
ತಾಂತ್ರಿಕ ವಶೀಕರಣ ನೀಡುವ ಯಂತ್ರ !
ಶ್ರೇಷ್ಠ ದುಷ್ಟರನ್ನೊಳಗೊಂಡ ಗುಣ
ಅಪೇಕ್ಷಿತ ಪ್ರತಿಫಲ ಕರುಣಿಸುವ
ಅಂಗೈಯಲ್ಲಿರುವ ಕಾಮಧೇನು !
-ಝಾಕೀರ್ ಹುಸೇನ್ ವಾಲಿಕಾರ್, ಬಳ್ಳಾರಿ
*****