ಕಾಡು ಹುಲ್ಲಿನ ಮೇಲೆ ಕಾಡುವ ಹುಡುಗ(ಗಿ)….
ಕಾಡು ಹುಲ್ಲಿನ ಮೇಲೆ ಎಷ್ಟೊತ್ತು ಮಲಗಲಿ,
ಕಾಡುವ ನೆನಪುಗಳ ಕಣ್ಣ್ತುಂಬಾ ಹೊತ್ತು?
ಕಾಡಿ ಕಾಡಿ ನನ್ನ ಪ್ರೀತಿಯ ಗಿಟ್ಟಿಸಿದಾತ,
ಗಿರಿಗಿಟ್ಲೆ ಆಡುತ್ತಾ ಗಿರಿಮರೆಯಲ್ಲಿ ಕಾಣದಾದ.
ಕಾಡು ಹುಲ್ಲಿನ ಮೇಲೆ ಎಷ್ಟೊತ್ತು ಮಲಗಲಿ,
ಕಾಡುವ ನೆನಪುಗಳ ಕಣ್ಣ್ತುಂಬಾ ಹೊತ್ತು?
ಕಾಡುತ್ತಾ ಕಾಡುತ್ತಾ ನನ್ನ ರಮಿಸುತ್ತಿದಾತ,
ಕಾಡು ಕಾಡಾಗಿ ಕಡೆದು ಹೋದ ಮೇಲೆ.
ಕಾಡು ಹುಲ್ಲಿನ ಮೇಲೆ ಎಷ್ಟೊತ್ತು ಮಲಗಲಿ,
ಕಾಡುವ ನೆನಪುಗಳ ಕಣ್ಣ್ತುಂಬಾ ಹೊತ್ತು?
ಕಾಡುಗಲ್ಲಾಗಿ ಕಡು ನೋವ ಮಡಿಲಲ್ಲಿ,
ಕದಡಿ ಹೋದವನ ದಾರಿಯ ಕಾಣುತ್ತಾ.
ಕಾಡು ಹುಲ್ಲಿನ ಮೇಲೆ ಎಷ್ಟೊತ್ತು ಮಲಗಲಿ,
ಕಾಡುವ ನೆನಪುಗಳ ಕಣ್ಣ್ತುಂಬಾ ಹೊತ್ತು?
ಕೇಡಾಗಿ ಚುಚ್ಚುವ ಕಾಡು ಹುಲ್ಲಿನ ಮೇಲೆ,
ಕಟುವಾಗಿ ಚುಚ್ಚುವ ನೆನಪುಗಳ ಮಳೆಯಲ್ಲಿ?
ಕಾಡು ಹುಲ್ಲಿನ ಮೇಲೆ ಎಷ್ಟೊತ್ತು ಮಲಗಲಿ,
ಕಾಡುವ ನೆನಪುಗಳ ಕಣ್ಣ್ತುಂಬಾ ಹೊತ್ತು?
-ಮನಂ(ಎಂ.ನಂಜುಂಡಸ್ವಾಮಿ)ಐಪಿಎಸ್ ಬೆಂಗಳೂರು *****