ಅನುದಿನ ಕವನ-೩೩೬, ಕವಯತ್ರಿ:ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ:ಏನಾದರೇನೂ….

ಏನಾದರೇನು….

ವೇದ – ಪುರಾಣಗಳ.                                      ಓದಿದರೇನು ?                                                 ಇನ್ನೊಬ್ಬರ ವೇದನೆಯನ್ನು                           ಅರಿಯದವನು !

ಗುಡಿ – ಗುಂಡಾರಗಳನ್ನು
ಸುತ್ತಿದರೇನು ?
ಗುಣದಲ್ಲಿ ಭಯ – ಭಕ್ತಿ
– ಯನ್ನರಿಯದವನು !

ಪರರಿಗೆ ಪ್ರೀತಿ – ಪ್ರೇಮವ
ತೋರಿದರೇನು ?
ಬಂದು – ಬಳಗಕ್ಕೆ
ಪ್ರಿಯನಾಗದವನು !

ವಿದ್ಯ ಕಲಿತು
ಹುದ್ದೆ ಪಡೆದರೇನು ?
ವಿನಯದ ಅರ್ಥವೇನೆಂದು
ತಿಳಿಯದವನು !

ಮದುವೆಯಾಗಿಹೆನೆಂದು
ಹಿರಿ – ಹಿರಿ ಹಿಗ್ಗಿದರೇನು ?
ಮನೆಯ ಜವಾಬ್ದಾರಿಯೇ
ಗೊತ್ತಿಲ್ಲದವನು !

ಜನರ ಸೇವೆ ಮಾಡುವೆನೆಂದು
ಓಟು ಗಿಟ್ಟಿಸಿದರೇನು ?
ಜನನಾಯಕನಾಗಲು
ಯೋಗ್ಯವಿಲ್ಲದವನು !


-ಶೋಭಾ ಮಲ್ಕಿ ಒಡೆಯರ್ 🖋
ಹೂವಿನ ಹಡಗಲಿ