ಹಗರಿಬೊಮ್ಮನಹಳ್ಳಿ, ಡಿ.9: ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಶರಣ ಬಂಧುಗಳ ಬಳಗ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನು ಶ್ರದ್ಧಾಪೂರ್ವಕ ಆಚರಿಸಿತು.
ಈಚೆಗೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಬಳಗದ ನಾಗರಾಜ ಗಂಟಿ ಮಾತನಾಡಿ, ವಿಶ್ವಜ್ಞಾನಿ ಡಾ.ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿ ಕೊಳ್ಳಬೇಕು ಎಂದು ಹೇಳಿದರು.
ದೇಶದ ಕೋಟ್ಯಾಂತರ ಶೋಷಿತರ ಬದುಕನ್ನು ಹಸನಗೊಳಿಸಿದ ಮಹಾ ಜ್ಞಾನಿ ಡಾ. ಅಂಬೇಡ್ಕರ್ ಅವರು ಪ್ರಾತಃಸ್ಮರಣೀಯರು ಎಂದರು.
ಇದೇ ಸಂದರ್ಭದಲ್ಲಿ ಸಂವಿಧಾನ ಪೀಠಿಕೆ ಭೋದಿಸಲಾಯಿತು.
ಕಾರ್ಯಕ್ರಮದಲ್ಲಿ ಜನಪದ ಕಲಾವಿದರಾದ ಮದ್ದಿ ಮಾಯಪ್ಪ, ಬೆಲ್ಲದಮಾಯಪ್ಪ,
ಕಿನ್ನೂರಿ ಮಹೇಶ್, ಜನಪದ ಕಲಾವಿದ ಲಕ್ಕಣ್ಣ, ಸಂತೋಷ್ ಗಂಟಿ, ಎಸ್.ಕೆ, ಶಿವಾನಂದ, ದೇವರಾಜ ಗಂಟಿ, ಓಣಿಯ ಚಿಣ್ಣರು ಪಾಲ್ಗೊಂಡಿದ್ದರು.
*****