ಅನುದಿನ ಕವನ:೩೪೩, ಕವಯತ್ರಿ: ಧರಣಿಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ಸಹಬಾಳ್ವೆ

ಸಹಬಾಳ್ವೆ

ಸತಿ ಪತಿ ಸಂಸಾರದ ಕಣ್ಣುಗಳು
ಬದುಕಿನ ಬಂಡಿಯ ಗಾಲಿಗಳು
ಅರಿತು ಬೆರೆತಾಗ ಸುಖವುಂಟು
ಮರೆತು ನಡೆದರೆ ದು:ಖವುಂಟು|

ಸಹಬಾಳ್ವೆ ಸಮಾನತೆಯ ಸಂಸಾರ
ಜಗದಲ್ಲಿ ಮೆರೆಯುವ ಆನಂದಸಾಗರ
ಪತಿ ಪತ್ನಿ ಎಂಬ ಭೇದ ಮಾಡದಿರಿ
ಅನ್ಯೊನ್ಯತೆಯಿಂದ ಸಾಗಿರಿ|

ಮಳೆಯಿರಲಿ ಚಳಿಯಿರಲಿ ಬಿಸಿಲಿರಲಿ
ರಕ್ಷಿಸುತ ಒಬ್ಬರನೊಬ್ಬರು ಬದುಕಿನಲಿ
ಜೀವನ ಜೋಕಾಲಿಯಂತೆ ಜೀಕುತಿರಲಿ
ಕಷ್ಟ ಸುಖಗಳನರಿತು ಮುಂದೆ ಸಾಗುತಿರಲಿ|

ಪತಿಯು ತಾ ಸತಿಯನು ಎಳೆವ ಗಾಡಿಯಲಿ
ಸತಿಯೂ ತಾ ಪತಿಗೆ ಕೊಡೆಹಿಡಿದು ಮಳೆಯಲ್ಲಿ
ಸಾಗಿಹರು ರಸ್ತೆಯಲಿ ಆಸರೆಯಾಗಿ
ಸಹಕಾರ ನೀಡುತಲಿ ಜೊತೆಯಾಗಿ|

-ಧರಣೀಪ್ರಿಯೆ, ದಾವಣಗೆರೆ