ನನಗೆ ಎಳ್ಳಷ್ಟೂ ಬೇಸರವಿಲ್ಲ
ನನಗೆ ಎಳ್ಳಷ್ಟೂ ಬೇಸರವಿಲ್ಲ,
ನೀನು ನನಗೆ ಸುಳ್ಳು ಹೇಳಿದೆ ಎಂದು,
ನನಗೆ ಎಳ್ಳಷ್ಟೂ ಬೇಸರವಿಲ್ಲ.
ನನಗೆ ಬೇಸರವೇನೆಂದರೆ,
ನಿನ್ನ ನಾನು ಇನ್ನು ಮುಂದೆ ನಂಬಬಾರದಲ್ಲ,
ಎಂಬ ಚಿಂತೆಯಲ್ಲಿ ಬೇಸರ ಮೂಡಿದೆ ಅಷ್ಟೆ.
ನನಗೆ ಎಳ್ಳಷ್ಟೂ ಬೇಸರವಿಲ್ಲ,
ನೀನು ಬರಲಿಲ್ಲ ನಾನು ಕರೆದರೂ ಎಂದು,
ನನಗೆ ಎಳ್ಳಷ್ಟೂ ಬೇಸರವಿಲ್ಲ.
ನನಗೆ ಬೇಸರವೇನೆಂದರೆ,
ನಿನ್ನ ಹಾದಿಯ ಇನ್ನು ಮುಂದೆ ನಾನು ಕಾಯಬಾರದಲ್ಲ,
ಎಂಬ ಚಿಂತೆಯಲ್ಲಿ ಬೇಸರ ಮೂಡಿದೆ ಅಷ್ಟೆ.
ನನಗೆ ಎಳ್ಳಷ್ಟೂ ಬೇಸರವಿಲ್ಲ,
ನೀನು ಕರೆ ಮಾಡುವುದಿಲ್ಲ ನನ್ನ ಕರೆಯ ಎತ್ತುವುದಿಲ್ಲ ಎಂದು,
ನನಗೆ ಎಳ್ಳಷ್ಟೂ ಬೇಸರವಿಲ್ಲ.
ನನಗೆ ಬೇಸರವೇನೆಂದರೆ,
ನಿನ್ನ ಕರೆಗಾಗಿ ಇನ್ನು ಮುಂದೆ ಕಾಯಬಾರದಲ್ಲ,
ಎಂಬ ಚಿಂತೆಯಲ್ಲಿ ಬೇಸರ ಮೂಡಿದೆ ಅಷ್ಟೆ.
ನನಗೆ ಎಳ್ಳಷ್ಟೂ ಬೇಸರವಿಲ್ಲ,
ನಿನಗೆ ಹಣ ಬೇಕಾದರೆ ಮಾತ್ರ ನನ್ನ ಬಳಿ ಬರುವೆ ಎಂದು,
ನನಗೆ ಎಳ್ಳಷ್ಟೂ ಬೇಸರವಿಲ್ಲ.
ನನಗೆ ಬೇಸರವೇನೆಂದರೆ,
ನಿನಗೆ ನಾನು ಇನ್ನು ಮುಂದೆ ಹಣ ನೀಡುವುದು ಸರಿಯಲ್ಲ,
ಎಂಬ ಚಿಂತೆಯಲ್ಲಿ ಬೇಸರ ಮೂಡಿದೆ ಅಷ್ಟೆ
– ಮನಂ
(ಎಂ.ನಂಜುಂಡ ಸ್ವಾಮಿ, ಐಪಿಎಸ್) ಬೆಂಗಳೂರು
*****